AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​ಗೆ ನೋಟೀಸ್ ನೀಡಲಾಗಿದೆ, ವಕ್ಫ್ ವಿರುದ್ಧ ಹೋರಾಡುತ್ತಿರುವವರಿಗಲ್ಲ: ಕುಮಾರ ಬಂಗಾರಪ್ಪ

ಯತ್ನಾಳ್​ಗೆ ನೋಟೀಸ್ ನೀಡಲಾಗಿದೆ, ವಕ್ಫ್ ವಿರುದ್ಧ ಹೋರಾಡುತ್ತಿರುವವರಿಗಲ್ಲ: ಕುಮಾರ ಬಂಗಾರಪ್ಪ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 02, 2024 | 12:25 PM

Share

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ವಕ್ಫ್ ಬೋರ್ಡ್​ ವಿರುದ್ಧ ಮಾಡಿದ ಹೋರಾಟದ ಮಧ್ಯಂತರ ವರದಿಯನ್ನು ಸಲ್ಲಿಸಲು ಇಂದು ಯತ್ನಾಳ್ ಮತ್ತು ಅವರ ತಂಡದ ಕೆಲ ಸದಸ್ಯರು ದೆಹಲಿಗೆ ತೆರಳಲಿದ್ದಾರೆ. ಶಿಸ್ತು ಸಮಿತಿ ನೀಡಿದ ನೋಟೀಸ್​ಗೆ ಯತ್ನಾಳ್ ದೆಹಲಿಯಲ್ಲೇ ಉತ್ತರ ನೀಡಬಹುದು.

ಬೆಳಗಾವಿ: ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್​ಗೆ ಪಕ್ಷದ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ನೋಟೀಸ್ ನೀಡಿರುವುದು ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಯತ್ನಾಳ್ ಬಣದ ಕುಮಾರ ಬಂಗಾರಪ್ಪ, ಸಮಿತಿಯು ಕೇವಲ ಯತ್ನಾಳ್ ಅವರಿಗೆ ಮಾತ್ರ ನೋಟೀಸ್ ನೀಡಿದೆ ಮತ್ತು ಅವರು ಅದಕ್ಕೆ ಉತ್ತರಿಸಲಿದ್ದಾರೆ, ವಕ್ಫ್ ಬೋರ್ಡ್ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಮುಖಂಡರಿಗೆ ನೋಟೀಸ್ ನೀಡಿಲ್ಲ, ಹಾಗಾಗಿ ಹೋರಾಟ ಮತ್ತು ನೋಟೀಸ್ ನಡುವೆ ಸಂಬಂಧವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.