ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು: ಎಚ್​​ಕೆ ಪಾಟೀಲ್

Edited By:

Updated on: Oct 19, 2026 | 3:47 PM

ಗದಗನಲ್ಲಿ ಮಾತನಾಡಿದ ಎಚ್​​​ಕೆ ಪಾಟೀಲ್, ಸ್ಟಿಂಗ್ ಆಪರೇಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ.ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಏನೂ ಲಾಭ ಇಲ್ಲ, ಮನ್ನಣೆ ಸಿಗಲ್ಲ. ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡಬೇಕು. ಅವರ ಬದಲಿಗೆ ಬೇರೆಯವರನ್ನು ತನಿಖೆಗೆ ನೇಮಿಸಬೇಕು. 200 ಅಧಿಕಾರಿಗಳು ಟ್ರ್ಯಾಪ್ ಆಗಿರೋದಕ್ಕೆ ಸಾಕ್ಷಿ ಏನಿದೆ? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಗದಗ, (ಅಕ್ಟೋಬರ್ 19): ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್‌ ರಾಜರಣದಲ್ಲಿ ಸಂಚಲನ ಮೂಡಿಸಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆದ್ರೆ, ಇದುವರೆಗೂ ವಿಡಿಯೋ ಹಂಚಿಕೆ ಮಾಡಿಕೊಂಡಿದ್ಯಾರು ಎನ್ನುವುದು ಮಾತ್ರ ಪತ್ತೆಯಾಗಿಲ್ಲ. ಇನ್ನೊಂದೆಡೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ನ್ಯಾಯಯುತವಾಗಿ ತನಿಖೆ ಆಗಬೇಕು. ಇದರ ಹಿಂದಿರುವವರನ್ನು ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಎಚ್​​ಡಿ ಪಾಟೀಲ್ ಪ್ರತಿಕ್ರಿಯಿಸಿ, ತನಿಖೆ ಮಾಡಲು ಹಿಂಜರಿಯವಂತ ಪೊಲೀಸರನ್ನು ಸರ್ಕಾರ ತಕ್ಷಣ ವಜಾ ಮಾಡಬೇಕು ಎಂದಿದ್ದಾರೆ.

ಈ ಬಗ್ಗೆ ಗದಗನಲ್ಲಿ ಮಾತನಾಡಿದ ಎಚ್​​​ಕೆ ಪಾಟೀಲ್, ಸ್ಟಿಂಗ್ ಆಪರೇಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ.ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಏನೂ ಲಾಭ ಇಲ್ಲ, ಮನ್ನಣೆ ಸಿಗಲ್ಲ. ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡಬೇಕು. ಅವರ ಬದಲಿಗೆ ಬೇರೆಯವರನ್ನು ತನಿಖೆಗೆ ನೇಮಿಸಬೇಕು. 200 ಅಧಿಕಾರಿಗಳು ಟ್ರ್ಯಾಪ್ ಆಗಿರೋದಕ್ಕೆ ಸಾಕ್ಷಿ ಏನಿದೆ? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More