Belagavi: ಜಿಲ್ಲಾ ಬಿಜೆಪಿ ಘಟಕದಲ್ಲಿ ಹೆಚ್ಚುತ್ತಿರುವ ಭಿನ್ನಮತವನ್ನು ಬಹಿರಂಗಪಡಿಸಿದ ರಮೇಶ್ ಜಾರಕಿಹೊಳಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2023 | 2:50 PM

ಹಿಂಭಾಗದಲ್ಲಿ ಕುಳಿತಿರುವ ರಮೇಶ್ ಅವರನ್ನು ಸಚಿವ ಬೈರತಿ ಬಸವರಾಜ ಸಾಹುಕಾರ ಮುಂದೆ ಬನ್ನಿ ಅಂತ ಕರೆಯುತ್ತಾರೆ. ಆದರೆ ಅವರ ಕರೆಗೆ ಓಗೊಡದ ರಮೇಶ, ಬೇರೆಯವರನ್ನು ಮುಂದೆ ಕಳಿಸುವ ಪ್ರಯತ್ನ ಮಾಡುತ್ತಾರೆ.

ಬೆಳಗಾವಿ: ಜಿಲ್ಲೆಯ ಬಿಜೆಪಿ ಘಟಕಕ್ಕೆ ವರಿಷ್ಠರಿಂದ ಸರ್ಜರಿಯ ಅವಶ್ಯಕತೆಯಿದೆ. ಸದ್ಯದ ಸ್ಥಿತಿ ಗಮನಿಸಿದರೆ ಎಲ್ಲ ಸಮಸ್ಯೆಗಳಿಗೆ ವಲಸೆಗಾರ ಸಾಹುಕಾರ ರಮೇಶ್ ಜಾರಕಿಹೊಳಿಯೇ (Ramesh Jarkiholi) ಮೂಲ ಕಾರಣ ಅನ್ನೋದು ಸ್ಪಷ್ಟವಾಗುತ್ತದೆ. ಇವತ್ತು ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಏನು ನಡೆಯಿತು ಅಂತ ಗಮನಿಸಿ. ಹಿಂಭಾಗದಲ್ಲಿ ಕುಳಿತಿರುವ ರಮೇಶ್ ಅವರನ್ನು ಸಚಿವರಾದ ಬೈರತಿ ಬಸವರಾಜ (Byrathi Basavaraj) ಸಾಹುಕಾರ ಮುಂದೆ ಬನ್ನಿ ಅಂತ ಕರೆಯುತ್ತಾರೆ. ಆದರೆ ಅವರ ಕರೆಗೆ ಓಗೊಡದ ರಮೇಶ ಬೇರೆಯವರನ್ನು ಮುಂದೆ ಕಳಿಸುವ ಪ್ರಯತ್ನ ಮಾಡುತ್ತಾರೆ. ಕೊನೆಗೆ ಬಸವರಾಜ ಅವರ ಬಲವಂತ ಜಾಸ್ತಿಯಾದಾಗ ರಮೇಶ್ ಮುಂದೆ ಬಂದು ಕುಳಿತುಕೊಳ್ಳುತ್ತಾರೆ. ಬಸವರಾಜ ಅವರ ಬಲಭಾಗದಲ್ಲಿ ಕುಳಿತಿದ್ದ ಇನ್ನೊಬ್ಬ ಹಿರಿಯ ಸಚಿವ ಗೋವಿಂದ ಕಾರಜೋಳ (Govind Karjol) ಮಾಧ್ಯಮ ಪ್ರತಿನಿಧಿಗಳ ಮುಂದೆ ಆದ ಮುಜುಗುರವನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 09, 2023 02:50 PM