ಯೂತ್​​ ಕಾಂಗ್ರೆಸಿಗರ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​​: ಸ್ಫೋಟಕ ಹೇಳಿಕೆ ಕೊಟ್ಟ ಉಪಾಧ್ಯಕ್ಷೆ

Edited By:

Updated on: May 24, 2026 | 2:19 PM

ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡರ ವಿರುದ್ಧದ ಆರೋಪಗಳನ್ನು ದಿವ್ಯಾ ಗೌಡ ತಳ್ಳಿಹಾಕಿದ್ದಾರೆ. ಸಭೆಯಲ್ಲಿ ಗಲಾಟೆ ಸೃಷ್ಟಿಸಲು ಕೆಲವರು ಉದ್ದೇಶಪೂರ್ವಕವಾಗಿ ಬಂದಿದ್ದರು ಎಂದು ಅವರು ತಿಳಿಸಿದ್ದು, ಮಹಿಳೆಯರ ಸುರಕ್ಷತೆ ಇಲ್ಲ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಮಂಜುನಾಥ್ ಗೌಡರು ರಾಜ್ಯಾದ್ಯಂತ 800 ಕಿ.ಮೀ. ಓಡಾಡಿ ಸಂಘಟನೆ ಮಾಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು, ಮೇ 24: ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ವಿಚಾರ ಸಂಬಂಧ ದೀಪಿಕಾ ರೆಡ್ಡಿ ಮಾಡಿರುವ ಆರೋಪ ಸುಳ್ಳು ಎಂದು ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯಾ ಹೇಳಿದ್ದಾರೆ. ಸಭೆ ಶುರುವಾದಾಗ ಗಲಾಟೆ ಮಾಡಬೇಕಂತಲೇ ಬಂದು ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬುದನ್ನು ನಾವು ಒಪ್ಪಲ್ಲ. ದೀಪಿಕಾ ರೆಡ್ಡಿ 12 ಲಕ್ಷ ಮತ​ ತೆಗೆದುಕೊಂಡಿದ್ದೇನೆ ಅಂತಾರೆ. JDSಗೆ ಹೋಗಿದ್ದ ದೀಪಿಕಾ ರೆಡ್ಡಿ ಮತ್ತೆ ಕಾಂಗ್ರೆಸ್​ಗೆ ಬಂದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಎಂದು ದಿವ್ಯಾ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us