ಕನಕಪುರಕ್ಕೆ ಸೀಮಿತವಾಗಿದ್ದ ಸಹೋದರರ ಗೂಂಡಾಗಿರಿ ಈಗ ಆರ್ ಆರ್ ನಗರದವರೆಗೆ ವಿಸ್ತರಿಸಿದೆ: ಮುನಿರತ್ನ ನಾಯ್ಡು

|

Updated on: Apr 09, 2024 | 6:27 PM

ಯಾರಾದರೂ ಬಿಜೆಪಿ ಬಾವುಟ ಹಿಡಿದುಕೊಂಡು ತಿರುಗಾಡುತ್ತಿರುವುದು ವಾಟ್ಟ್ಯಾಪ್ ನಲ್ಲಿ ಕಂಡರೆ ಸಹೋದರರು ಅದನ್ನು ಜೂಮ್ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳಿಸುತ್ತಾರೆ. ಕಾಂಗ್ರೆಸ್ ಪರ ಕೆಲಸ ಮಾಡುವುದಾದರೆ ಆರ್ ಅರ್ ನಗರದಲ್ಲಿರಬಹುದು, ಇಲ್ಲಾಂದ್ರೆ ಊರು ಬಿಟ್ಟು ಹೋಗ್ತಾ ಇರು ಅಂತ ಅವನಿಗೆ ಧಮ್ಕಿ ಹಾಕಲಾಗುತ್ತದೆ ಎಂದು ಮುನಿರತ್ನ ಹೇಳಿದರು. ಇದು ಆದಷ್ಟು ಬೇಗ ಕೊನೆಗೊಳ್ಳಲಿದೆ, ಅಲ್ಲಿಯವರಗೆ ಕಾಯಬೇಕು ಎಂದು ಅವರು ಹೇಳಿದರು.

ಬೆಂಗಳೂರು: ನಗರದಲ್ಲಿ ಇಂದು ಬಿಜೆಪಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು (Munirathna Naidu), ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಮಾತಾಡಿದರು. ಇವತ್ತು ಯುಗಾಗಿ ಹಬ್ಬ (Ugadi festival) ಮತ್ತು ಬೇವು ಬೆಲ್ಲ ಹಬ್ಬದ ಪ್ರಮುಖ ಅಂಶಗಳಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Rural constituency) ಕಳೆದ ಹತ್ತು ವರ್ಷಗಳಿಂದ ಬೇವಿನ ಕಹಿ ಅನುಭವಿಸಿಯಾಗಿದೆ ಇನ್ನು ಮುಂದಿನ ಹತ್ತು ವರ್ಷಗಳ ಕಾಲ ಬೆಲ್ಲದ ಸಿಹಿಯನ್ನು ಸವಿಯುವ ಸಮಯ ಎಂದು ಹೇಳಿದರು. ಸಹೋದರರ ಗೂಂಡಾಗಿರಿ ಮೊದಲೆಲ್ಲ ಕನಕಪುರಕ್ಕೆ ಮಾತ್ರ ಸೀಮಿತವಾಗಿತ್ತು ಅದರೆ ಕ್ರಮೇಣ ಆರ್ ಆರ್ ನಗರದವರೆಗೆ ವ್ಯಾಪಿಸಿದೆ. ಯಾರಾದರೂ ಬಿಜೆಪಿ ಬಾವುಟ ಹಿಡಿದುಕೊಂಡು ತಿರುಗಾಡುತ್ತಿರುವುದು ವಾಟ್ಟ್ಯಾಪ್ ನಲ್ಲಿ ಕಂಡರೆ ಸಹೋದರರು ಅದನ್ನು ಜೂಮ್ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳಿಸುತ್ತಾರೆ. ಕಾಂಗ್ರೆಸ್ ಪರ ಕೆಲಸ ಮಾಡುವುದಾದರೆ ಆರ್ ಅರ್ ನಗರದಲ್ಲಿರಬಹುದು, ಇಲ್ಲಾಂದ್ರೆ ಊರು ಬಿಟ್ಟು ಹೋಗ್ತಾ ಇರು ಅಂತ ಅವನಿಗೆ ಧಮ್ಕಿ ಹಾಕಲಾಗುತ್ತದೆ ಎಂದು ಮುನಿರತ್ನ ಹೇಳಿದರು. ಇದು ಆದಷ್ಟು ಬೇಗ ಕೊನೆಗೊಳ್ಳಲಿದೆ, ಅಲ್ಲಿಯವರಗೆ ಕಾಯಬೇಕು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು

Published on: Apr 09, 2024 06:26 PM