ಪ್ರಚಾರದ ನಡುವೆ ಯುಗಾದಿ; ಅಭಿಮಾನಿ ಮನೆಯಲ್ಲಿ ಶಿವಣ್ಣ-ಗೀತಾ ಹೋಳಿಗೆ ಊಟ
ಗೀತಾ ಹಾಗೂ ಶಿವರಾಜ್ಕುಮಾರ್ ಅವರು ಈಗ ಶಿವಮೊಗ್ಗದಲ್ಲಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅವರು ನಿರತರಾಗಿದ್ದಾರೆ. ಈ ನಡುವೆ ಯುಗಾದಿ ಹಬ್ಬ ಬಂದಿದ್ದು, ಅಭಿಮಾನಿಗಳ ಮನೆಯಲ್ಲಿ ಶಿವಣ್ಣ ಮತ್ತು ಗೀತಾ ಹೋಳಿಗೆ ಊಟ ಸವಿದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ಶಿವರಾಜ್ಕುಮಾರ್ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಅವರು ಪ್ರವಾಸ ಕೈಗೊಂಡಿದ್ದಾರೆ. ಮನೆಮನೆಗೂ ತೆರಳಿ ಮತ ಕೇಳುತ್ತಿದ್ದಾರೆ. ಇದರ ನಡುವೆಯೇ ಯುಗಾದಿ ಹಬ್ಬ (Ugadi 2024) ಬಂದಿದೆ. ಈಗ ಗೀತಾ ಮತ್ತು ಶಿವರಾಜ್ಕುಮಾರ್ ಅವರು ಶಿವಮೊಗ್ಗದಲ್ಲಿದ್ದಾರೆ. ಅಭಿಮಾನಿಗಳ ಮನೆಯಲ್ಲಿ ಅವರು ಹಬ್ಬದ ಊಟ ಸವಿದಿದ್ದಾರೆ. ಹೋಳಿಗೆ ಊಟ ಮಾಡಿದ ವಿಡಿಯೋ ಇಲ್ಲಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಈ ಮೊದಲು ಕೂಡ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ಪರವಾಗಿ ಚಿತ್ರರಂಗದ ಅನೇಕರು ಬೆಂಬಲ ಸೂಚಿಸಿದ್ದಾರೆ. ಶಿವರಾಜ್ಕುಮಾರ್ (Shivarajkumar) ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಗೆ ಸಣ್ಣ ಬ್ರೇಕ್ ನೀಡಿದ್ದಾರೆ. ಪತ್ನಿಯ ಪರವಾಗಿ ಅವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈಗ ಚೇತರಿಸಿಕೊಂಡು ಮತ್ತೆ ಆ್ಯಕ್ಟೀವ್ ಆಗಿ ಪ್ರಚಾರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.