ಮಾತಿನಂತೆ ನಡೆದು ಬೆಳಗಾವಿಯಲ್ಲಿ ಮನೆ ಮಾಡಿ ಕುಟುಂಬದೊಂದಿಗೆ ಗೃಹಪ್ರವೇಶ ಮಾಡಿದ ಜಗದೀಶ್ ಶೆಟ್ಟರ್
ಶೆಟ್ಟರ್ ತಾವು ವಾಗ್ದಾನ ಮಾಡಿದಂತೆ ಬೆಳಗಾವಿ ನಗರದಲ್ಲಿ ಮನೆ ಮಾಡಿದ್ದಾರೆ ಮತ್ತು ಇವತ್ತು ಕುಟುಂಬದ ಸದಸ್ಯರೊಂದಿಗೆ ಗೃಹಪ್ರವೇಶ ಮಾಡಿದರು. ಅರ್ಚಕರು ಮನೆಶಾಂತಿಗಾಗಿ ಪೂಜಾ ಕೈಂಕರ್ಯ ನೆರವೇರಿಸುತ್ತಿರುವುದನ್ನು ಮತ್ತು ಕುಟುಂಬದ ಸದಸ್ಯರು ಹಾಲು ಉಕ್ಕಿಸುವುದನ್ನು ಇಲ್ಲಿ ನೋಡಬಹುದು.
ಬೆಳಗಾವಿ: ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಪಕ್ಷದ ನಾಯಕರು ನಿರೀಕ್ಷಿಸಿದಕ್ಕಿಂತಲೂ ದುಪ್ಪಟ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ರಾಜಕೀಯಲ್ಲಿ ಎಳಸು ಅನಿಸಿಕೊಳ್ಳುವ ಮೃಣಾಲ್ ಹೆಬ್ಬಾಳ್ಕರ್ ಇದ್ದಾರೆ. ಮೃಣಾಲ್, ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ. ಇದೇ ಕಾರಣಕ್ಕೆ ನಾವು ಸಚಿವೆಯನ್ನು ಪ್ರಭಾವಿ ಅಂತ ಹೇಳಿದ್ದು. ಬೆಳಗಾವಿಯಲ್ಲಿ ದಶಕಗಳಿಂದ ಪಕ್ಷಕ್ಕಾಗಿ ದುಡಿದ ಮುಖಂಡರಿದ್ದರೂ ತಮ್ಮ ಮಗನಿಗೆ ಟಿಕೆಟ್ ಗಿಟ್ಟಿಸುವಲ್ಲಿ ಅವರು ಸಫಲರಾಗಿದ್ದಾರೆ. ಬಿಡಿ ಅದನ್ನು ಮತ್ತೊಮ್ಮೆ ಚರ್ಚಿಸುವ, ಈಗಿನ ಚರ್ಚೆಯ ವಿಷಯವೆಂದರೆ, ಶೆಟ್ಟರ್ ತಾವು ವಾಗ್ದಾನ ಮಾಡಿದಂತೆ ಬೆಳಗಾವಿ ನಗರದಲ್ಲಿ ಮನೆ ಮಾಡಿದ್ದಾರೆ ಮತ್ತು ಇವತ್ತು ಕುಟುಂಬದ ಸದಸ್ಯರೊಂದಿಗೆ ಗೃಹಪ್ರವೇಶ ಮಾಡಿದರು. ಅರ್ಚಕರು ಮನೆಶಾಂತಿಗಾಗಿ ಪೂಜಾ ಕೈಂಕರ್ಯ ನೆರವೇರಿಸುತ್ತಿರುವುದನ್ನು ಮತ್ತು ಕುಟುಂಬದ ಸದಸ್ಯರು ಹಾಲು ಉಕ್ಕಿಸುವುದನ್ನು ಇಲ್ಲಿ ನೋಡಬಹುದು. ಕಾಂಗ್ರೆಸ್ ನಾಯಕರು ಶೆಟ್ಟರ್ ಅವರನ್ನು ಔಟ್ ಸೈಡರ್ ಅಂತ ತಮ್ಮ ಪ್ರಚಾರದಲ್ಲಿ ಉಲ್ಲೇಖಿಸುತ್ತಿದ್ದ ಕಾರಣ ಶೆಟ್ಟರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್; ಪ್ರಚಾರಕ್ಕೆ ಹೋಗುತ್ತೇನೆ ಎಂದ ಮಂಗಳಾ ಅಂಗಡಿ