ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳು ಅಂದು ಆಡಿದ್ದ ಮಾತು: ಡಿಕೆಶಿಗೆ ಸಿಎಂ ಪಟ್ಟದ ಸುದ್ದಿ ಬೆನ್ನಲ್ಲೇ ಸ್ವಾಮೀಜಿ ಭೇಟಿಯಾದ ತಮ್ಮಯ್ಯ

Edited By:

Updated on: May 27, 2026 | 12:46 PM

ರಾಜ್ಯ ಕಾಂಗ್ರೆಸ್​​ನಲ್ಲಿ ಪಟ್ಟದ ಫೈಟ್​​ಗೆ ಕೊನೆಗೂ ತೆರೆ ಬೀಳುವ ಸಾಧ್ಯತೆ ಗೋಚರಿಸಿದ್ದು, ಡಿಸಿಎಂ ಡಿಕೆಶಿ ಮುಖ್ಯಮಂತ್ರಿಯಾಗುವ ಕಾಲ ಸಮೀಪಿಸಿದೆ ಎನ್ನಲಾಗಿದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನಾಳೆ ರಾಜೀನಾಮೆ ನೀಡಲಿದ್ದು, ಆ ಮೂಲಕ ಈ ಹಿಂದೆ ರಂಭಾಪುರಿ ಶ್ರೀಗಳು ನುಡಿದಿದ್ದ ಹೇಳಿಕೆ ಸತ್ಯವಾಗುವ ಕಾಲ ಬಂದಿದೆ. ಈ ಬೆನ್ನಲ್ಲೇ ಶಾಸಕ ತಮ್ಮಯ್ಯ ಶ್ರೀಗಳನ್ನು ಭೇಟಿಯಾಗಿದ್ದು, ನಿಮ್ಮ ಮಾತು ಸತ್ಯವಾಗುತ್ತಿದೆ. ನಿಮ್ಮ ಆಶೀರ್ವಾದದಿಂದ ಡಿಕೆಶಿ ಸಿಎಂ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು, ಮೇ 27: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನಾಳೆ ರಾಜೀನಾಮೆ ನೀಡಲಿದ್ದಾರೆ. ರಾಜ್ಯದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ರಂಭಾಪುರಿ ಶ್ರೀಗಳ ಈ ಹಿಂದಿನ ಹೇಳಿಕೆ ಸತ್ಯವಾಗುತ್ತಿರುವ ಮಾತುಗಳು ಕೇಳಿಬಂದಿವೆ. ರಂಭಾಪುರಿ ಜಗದ್ಗುರುಗಳೊಂದಿಗೆ ಶಾಸಕ ತಮ್ಮಯ್ಯ ಈ ಸಂಬಂಧ ಮಾತುಕತೆ ನಡೆಸಿದ್ದು, ನಿಮ್ಮ ಆಶೀರ್ವಾದದಿಂದ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿದ್ದಾರೆ. ನೀವು ಏನು ಹೇಳಿದ್ದೀರೋ ಅದರಂತೆಯೇ ಆಗುತ್ತಿದೆ. ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದವರು ನೀವು ಎಂದು ಚಿಕ್ಕಮಗಳೂರು ನಗರದ ರೇಣುಕಾಸ್ವಾಮಿ ಕಲ್ಯಾಣ ಮಂಟಪದಲ್ಲಿ ತಮ್ಮಯ್ಯ ಶ್ರೀಗಳ ಬಳಿ ಹೇಳಿದ್ದಾರೆ. ಈ ಹಿಂದೆ ರಾಮನಗರದಲ್ಲಿ ಶ್ರೀಗಳು ಡಿಕೆಶಿ ಸಿಎಂ ಆಗುವ ಕುರಿತು ಹೇಳಿಕೆ ನೀಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: May 27, 2026 12:45 PM
Loading...
Unable to load recommendations.
Follow Us