ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಶೇ.60ರಷ್ಟು ಹೊಸ ಮುಖಗಳಿಗೆ ಮಣೆಹಾಕಲು ಹೈಕಮಾಂಡ್ ನಿರ್ಧಾರ
Karnataka Politics: ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ ಶೇ.60ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಜಾತಿ, ಸಮಾಜದ ಸ್ಥಿತಿಗತಿಗಳು, ಶಿಕ್ಷಣ ಮತ್ತು ಹಿನ್ನಲೆಯನ್ನು ಆಧರಿಸಿ ಆಯ್ಕೆ ನಡೆಯಲಿದ್ದು, ಹೊಸ ನಾಯಕತ್ವವು ಪಕ್ಷಕ್ಕೆ ಆಸ್ತಿಯಾಗಲಿದೆ ಎಂಬ ಅಭಿಪ್ರಾಯ ವರಿಷ್ಠರದ್ದು ಎನ್ನಲಾಗಿದೆ.
ಬೆಂಗಳೂರು, ಜುಲೈ 17: ಕರ್ನಾಟಕ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು ಶೇ.60ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲುಚಿಂತನೆ ನಡೆಸಿದೆ. ಯುವ ಮತ್ತು ಕ್ರಿಯಾಶೀಲ ತಂಡವನ್ನು ರೂಪಿಸುವ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಸ್ಥಾನ ಪಡೆಯುವವರ ಆಯ್ಕೆಗೆ ಹಲವು ಮಾನದಂಡಗಳನ್ನು ಅನುಸರಿಸಲು ನಿರ್ಧರಿಸಲಾಗಿದೆ. ಜಾತಿ, ಸಮಾಜದ ಸ್ಥಿತಿಗತಿಗಳು, ಅಭ್ಯರ್ಥಿಗಳ ಹಿನ್ನೆಲೆ, ಶಿಕ್ಷಣ ಮತ್ತು ಅನುಭವ ಇವುಗಳಲ್ಲಿ ಸೇರಿವೆ. ಹೊಸಬರಿಗೆ ಅವಕಾಶ ನೀಡುವುದರಿಂದ ಪಕ್ಷಕ್ಕೆ ಹೊಸ ನಾಯಕತ್ವ ಸಿಗುತ್ತದೆ ಮತ್ತು ಅವರು ಪಕ್ಷದ ಆಸ್ತಿಯಾಗುತ್ತಾರೆ ಎಂಬ ಅಭಿಪ್ರಾಯ ವರಿಷ್ಠರಿಂದ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್ಲೈನ್ ನಿಗದಿಪಡಿಸಿದ ಸುಪ್ರೀಂ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ

