ಶಾಮನೂರು ಶಿವಶಂಕರಪ್ಪ ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ಅವರೊಂದಿಗೆ ಚರ್ಚೆ ಮಾಡ್ತೀನಿ: ಡಿಕೆ ಶಿವಕುಮಾರ್

|

Updated on: Sep 30, 2023 | 6:01 PM

ಲಿಂಗಾಯತ ಸಮಯದಾಯಕ್ಕೆ ಸೇರಿದ ಶಾಸಕನಿಗೆ ಡಿಸಿಎಂ ಹುದ್ದೆ ಅಲ್ಲ, ಮುಖ್ಯಮಂತ್ರಿ ಹುದ್ದೆಯೇ ಬೇಕು ಮತ್ತು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಶಾಮನೂರು ಹೇಳಿದ್ದನ್ನು ಶಿವಕುಮಾರ್ ಗೆ ಹೇಳಿದಾಗ ಏನಂತ ಗೊತ್ತಿಲ್ಲ, ಅವರೊಂದಿಗೆ ಮಾತಾಡ್ತೀನಿ, ಚೆಕ್ ಮಾಡಿ ಹೇಳ್ತೀನಿ ಅಂತಷ್ಟೇ ಹೇಳಿದರು.

ಬೆಂಗಳೂರು: ಸದ್ಯದ ಕಾಂಗ್ರೆಸ್ ನಾಯಕರ ಪೈಕಿ 93-ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪನವರೇ (Shamanur Shivashankarappa) ಪ್ರಾಯಶಃ ಅತ್ಯಂತ ಹಿರಿಯ ನಾಯಕರಾಗಿರಬಹುದು. ಆದರೆ ಅವರು ಲಿಂಗಾಯತ ಸಮುದಾಯದ ಬಗ್ಗೆ ಧ್ವನಿ ಎತ್ತಿರೋದು ಪಕ್ಷದ ಪ್ರಮುಖ ನಾಯಕರಿಗೆ ಮುಜುಗುರ ಉಂಟುಮಾಡುತ್ತಿರುವಂತೆ ಭಾಸವಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಕೇಳಿದ ಪ್ರಶ್ನೆಯನ್ನೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಕೇಳಿದರು. ಲಿಂಗಾಯತ ಸಮಯದಾಯಕ್ಕೆ ಸೇರಿದ ಶಾಸಕನಿಗೆ ಡಿಸಿಎಂ ಹುದ್ದೆ ಅಲ್ಲ, ಮುಖ್ಯಮಂತ್ರಿ ಹುದ್ದೆಯೇ ಬೇಕು ಮತ್ತು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಶಾಮನೂರು ಹೇಳಿದ್ದನ್ನು ಶಿವಕುಮಾರ್ ಗೆ ಹೇಳಿದಾಗ ಏನಂತ ಗೊತ್ತಿಲ್ಲ, ಅವರೊಂದಿಗೆ ಮಾತಾಡ್ತೀನಿ, ಚೆಕ್ ಮಾಡಿ ಹೇಳ್ತೀನಿ ಅಂತಷ್ಟೇ ಅವರು ಹೇಳಿ ಹೊರಡಲನುವಾದರು. ಡಿಜೆ ಹಳ್ಳಿ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಗೃಹ ಸಚಿವರು ಅದಕ್ಕೆ ಉತ್ತರಿಸುತ್ತಾರೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ