ಸಿಬಿಐ ತನಿಖೆ ಆದೇಶ ವಾಪಸ್ಸು ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಸಮಂಜಸ ಉತ್ತರ ನೀಡಲಿಲ್ಲ!

|

Updated on: Nov 24, 2023 | 10:51 AM

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಅಡ್ವೋಕೇಟ್ ಜನರಲ್ ಪ್ರಭು ನಾವದಗಿ ಅವರ ವರದಿಯನ್ನು ಆದರಿಸಿ ಡಿಕೆ ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಆ ಸರ್ಕಾರ ಆದೇಶಿಸಿತ್ತು. ಈಗ ಅಡ್ವೋಕೇಟ್ ಜನರಲ್ ಆಗಿರುವ ಶಶಿಕಿರಣ್ ಶೆಟ್ಟಿ ವರದಿ ಆಧರಿಸಿ ಕಾಂಗ್ರೆಸ್ ಸರ್ಕಾರ ತನಿಖೆ ಆದೇಶವನ್ನು ವಾಪಸ್ಸು ಪಡೆದಿದೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲ್ಲ. ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆಗಳಿಗೆ ಒಂದೋ ಹಾರಿಕೆ ಉತ್ತರ ನೀಡುತ್ತಾರೆ ಇಲ್ಲವೇ ಅದನ್ನು ಸ್ಕಿಪ್ ಮಾಡುತ್ತಾರೆ. ಇವತ್ತು ನಗರದಲ್ಲಿ ಆಗಿದ್ದು ಅದೇ. ಶಿವಕುಮಾರ್ ಅಕ್ರಮ ಆದಾಯ (disproportionate assets) ಗಳಿಕೆಗೆ ಸಂಬಂಧಿಸಿದ ಸಿಬಿಐ ತನಿಖೆಗೆ (CBI investigation) ನೀಡಿದ್ದ ಆದೇಶವನ್ನು ಹಿಂಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಕುರಿತು ಕೇಳಿದ ಪ್ರಶ್ನೆಗೆ ಅವರು ಉದಾಸೀನತೆಯಿಂದ ಉತ್ತರಿಸಿದರು. ತಾವು ಅದನ್ನು ಪತ್ರಿಕೆಗಳಲ್ಲಿ ಓದಿರುವುದಾಗಿ ಹೇಳಿದ ಅವರು ಅದರ ಬಗ್ಗೆ ಮಾತಾಡುವುದಿಲ್ಲ, ಸಂಬಂಧಪಟ್ಟವರು ಮಾತಾಡುತ್ತಾರೆ ಎಂದು ಹೇಳಿದರು. ಬಿಜೆಪಿ ನಾಯಕರು ಸರ್ಕಾರದ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ ಅಂತ ಪತ್ರಕರ್ತರು ಕೇಳಿದಾಗ ಅವರು ಉತ್ತರಿಸುವ ಗೋಜಿಗೆ ಹೋಗದೆ, ಕಾರಲ್ಲಿ ಕುಳಿತು ಹೊರಟುಬಿಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ