ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆ ಶಿವಕುಮಾರ್: ಏನಂದ್ರು ನೋಡಿ

Updated on: Dec 24, 2025 | 1:57 PM

ದೆಹಲಿ ಭೇಟಿಯಲಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಚಿವ ಕೆಎನ್ ರಾಜಣ್ಣಗೆ ತಿರುಗೇಟು ನೀಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ರಾಜಣ್ಣ ನೀಡಿರುವ ಹೇಳಿಕೆ ಮತ್ತು ಹೈಕಮಾಂಡ್ ನಾಯಕರಿಗೆ ಬರೆದಿರುವ ಸರಣಿ ಪತ್ರದ ಬಗ್ಗೆ ಡಿಕೆಶಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಮಾತಿನ ವಿಡಿಯೋ ಇಲ್ಲಿದೆ.

ನವದೆಹಲಿ, ಡಿಸೆಂಬರ್ 24: ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಆಪ್ತ ಕೆಎನ್ ರಾಜಣ್ಣಗೆ ಖಾರವಾಗಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ರಾಜಣ್ಣ ಸರಣಿ ಪತ್ರ ಬರೆದಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಅಧ್ಯಕ್ಷರು ಸರಿಯಾಗಿ ಆಯ್ಕೆ ಮಾಡಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ 12-13 ಸ್ಥಾನಗಳನ್ನು ಹೆಚ್ಚು ಗೆಲ್ಲಬಹುದಿತ್ತು ಎಂದು ಹೈಕಮಾಂಡ್​ಗೆ ಬರೆದ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಇನ್ನೂ ಸ್ವಲ್ಪ ಅನುಭವ ಕಡಿಮೆ ಇದೆ. ತರಬೇತಿ ಪಡೆದುಕೊಂಡು ಬರುತ್ತೇನೆ ಎಂದರು. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ಮಾಜಿ ಸಿಎಂ ಎಸ್ಎಂ ಕೃಷ್ಣ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಕೃಷ್ಣ ಅವರು ಈಗ ಇಲ್ಲವಲ್ಲ, ದೇವರಲ್ಲಿ ಕೇಳಿಕೊಂಡು ಬರಬೇಕಷ್ಟೇ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ