ಅಧಿಕೃತ ಘೋಷಣೆಗೂ ಮುನ್ನವೇ ಸಚಿವರ ಹೆಸರು ಬಹಿರಂಗ ಪಡಿಸಿದ ಡಿಸಿಎಂ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ತಮ್ಮ ಫೇಸ್ ಬುಕ್ ಫೋಸ್ಟ್ನಲ್ಲಿ ನೂತನ ಸಚಿವರ ಹೆಸರು ಬಹಿರಂಗಪಡಿಸಿದ್ದಾರೆ. ನೂತನ ಸಚಿವರಿಗೆ ಅಭಿನಂದನೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ.
ಅಧಿಕೃತ ಘೋಷಣೆಗೂ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ತಮ್ಮ ಫೇಸ್ ಬುಕ್ ಫೋಸ್ಟ್ನಲ್ಲಿ ನೂತನ ಸಚಿವರ ಹೆಸರು ಬಹಿರಂಗಪಡಿಸಿದ್ದಾರೆ. ನೂತನ ಸಚಿವರಿಗೆ ಅಭಿನಂದನೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಸಚಿವ ಸಂಪುಟದ ನೂತನ ಸಚಿವರಾದ ಶ್ರೀ ಈಶ್ವರ್ ಖಂಡ್ರೆ(Eshwar Khandre), ಶೃಂಗೇರಿ ಶಾಸಕರಾದ ಶ್ರೀ ಟಿ. ಡಿ. ರಾಜೇಗೌಡ, ಚಿತ್ತಾಪುರ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ರವರು ಇಂದು ನನ್ನನ್ನು ನನ್ನ ನಿವಾಸದಲ್ಲಿ ಭೇಟಿ ಮಾಡಿ, ಶುಭ ಹಾರೈಸಿದರು ಎಂದು ಡಿಕೆ ಶಿವಕುಮಾರ್ ಫೋಟೋಗಳನ್ನು ಫೋಸ್ಟ್ ಮಾಡಿದ್ದರು.
ಆದ್ರೆ ಮೇ 20ರಂದು ನಡೆದ ಪ್ರಮಾಣಚವಚನ ಸ್ವೀಕಾರ ಸಮಾರಂಭದಲ್ಲಿ 8 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಪೈಕಿ ಈಶ್ವರ್ ಖಂಡ್ರೆಯವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಆದರೂ ಡಿಕೆ ಶಿವಕುಮಾರ್ ತಮ್ಮ ಫೋಸ್ಟ್ನಲ್ಲಿ ನೂತನ ಸಚಿವರಾದ ಎಂದು ಈಶ್ವರ್ ಖಂಡ್ರೆಯವರನ್ನು ನಮೂದಿಸಿದ್ದಾರೆ. ಆದ್ರೆ ಈಗ ತಮ್ಮ ಫೋಸ್ಟ್ನ್ನು ಡಿಕೆಶಿ ಸರಿಪಡಿಸಿದ್ದಾರೆ.