ಪತ್ನಿಗೆ ಸಿಲ್ಕ್ ಸೀರೆ ಖರೀದಿಸಿದ ಡಿಕೆಶಿ, ಡಿಸ್ಕೌಂಟ್ ಹೋಗಿ ಎಷ್ಟು ಆಯ್ತು ಗೊತ್ತಾ?
ಮೊನ್ನೇ ಅಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಂಡ್ತಿಯನ್ನು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಇದು ಒಂದೇ ಅಂತ ಅಲ್ಲ. ವಿವಿಧ ಕಾರ್ಯಕ್ರಮಗಳಿಗೆ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಇದೀಗ ಅವರಿಗಾಗಿಯೇ ಸಿಲ್ಕ್ ಸೀರೆಯೊಂದನ್ನು ಖರೀದಿಸಿದ್ದಾರೆ.
ಬೆಂಗಳೂರು, (ಫೆಬ್ರವರಿ 12): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಂಡತಿಗಾಗಿ ಸಿಲ್ಕ್ ಸೀರೆಯೊಂದನ್ನು ಖರೀದಿಸಿದ್ದಾರೆ. ಕರ್ನಾಟಕ ಎಗ್ಸಿಬಿಷನ್ ಸ್ಟಾಲ್‌ನಲ್ಲಿ ಪತ್ನಿ ಉಷಾ ಅವರಿಗೆ ಸಿಲ್ಕ್ ಸೀರೆ ಜೊತೆಗೆ ಒಂದು ಪರ್ಫ್ಯೂಮ್ ಕೂಡ ಖರೀದಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರೇ ಹೆಂಡ್ತಿಗಾಗಿ 26,025 ರೂ. ಬೆಲೆಯ ಸಿಲ್ಕ್ ಸೀರೆ ಸೆಲೆಕ್ಟ್ ಮಾಡಿದ್ದು, ಡಿಸ್ಕೌಂಟ್ ಹೋಗಿ 25 ಸಾವಿರ ಆಗಿದೆ. ಬಳಿಕ ಡಿಕೆಶಿ ತಮ್ಮ ಆಪ್ತರ ಕೈಗೆ 25 ಸಾವಿರ ರೂಪಾಯಿ ಕ್ಯಾಶ್ ಕೊಟ್ಟು ಸೀರೆ ಖರೀಸಿದಿಸಿ ಗಮನಸೆಳೆದಿದ್ದಾರೆ.