ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗಾಗಿ ಶಿವಕುಮಾರ್ ಬಹಳ ಶ್ರಮಿಸುತ್ತಿದ್ದಾರೆ: ರಘುನಂದನ್ ರಾಮಣ್ಣ
ಮುನಿಸಿಕೊಂಡಿರುವ ರಾಮಣ್ಣ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸೋಲಿಗೆ ಕಾರಣರಾಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ತೇಲಾಡುತ್ತಿದೆ. ಆದರೆ ಯೋಗೇಶ್ವರ್ ತನ್ನಿಂದಲೇ ಗೆಲ್ಲೋದು, ಶಿವಕುಮಾರ್ ಜೊತೆ ಯೋಗೇಶ್ವರ್ ಸಹ ತನ್ನ ನಾಯಕ ಎನ್ನುವ ರಾಮಣ್ಣ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಡಿಕೆ ಸುರೇಶ್ ಅವರ ವೋಟ್ ಶೇರನ್ನು 15 ಸಾವಿರದಿಂದ 87 ಸಾವಿರಕ್ಕೆ ಹೆಚ್ಚಿಸಿದನ್ನು ವಿವರಿಸುತ್ತಾರೆ.
ರಾಮನಗರ: ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಟಿಕೆಟ್ ಗಿಟ್ಟಿಸದೆ ಹೋಗಿದ್ದರೆ ಈ ಅಜಾನುಬಾಹು ವ್ಯಕ್ತಿ ರಘುನಂದನ್ ರಾಮಣ್ಣ ಪಕ್ಷದ ಅಭ್ಯರ್ಥಿಯಾಗಿರುತ್ತಿದ್ದರು. ಇವರ ನಾಮಪತ್ರವನ್ನೂ ಡಿಕೆ ಶಿವಕುಮಾರ್ ಅವರ ಅಕೌಂಟಟ್ ರೆಡಿ ಮಾಡಿದ್ದರಂತೆ. ನಮ್ಮ ರಾಮನಗರ ವರದಿಗಾರನೊಂದಿಗೆ ರಾಮಣ್ಣ ಮುಕ್ತವಾಗಿ ಮತ್ತು ನಿರರ್ಗಳವಾಗಿ ಮಾತಾಡಿದ್ದಾರೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಅಸಮಾಧಾನ ಉಂಟಾಗಿದ್ದು ನಿಜವಾದರೂ ಈಗ ಅದು ತಿಳಿಯಾಗಿದೆ ಎನ್ನುತ್ತಾರೆ ರಾಮಣ್ಣ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ನಿಂದ ಮತ್ತೆ ಬಿಗ್ ಆಪರೇಷನ್