ನಾನು ವಲಸಿಗನಲ್ಲ, ಕನ್ನಡದ ಮಣ್ಣಲ್ಲಿ ಹುಟ್ಟಿದವನು, ರಾಮನಗರ ಕರ್ಮಭೂಮಿ: ಹೆಚ್ ಡಿ ಕುಮಾರಸ್ವಾಮಿ

ನಾನು ವಲಸಿಗನಲ್ಲ, ಕನ್ನಡದ ಮಣ್ಣಲ್ಲಿ ಹುಟ್ಟಿದವನು, ರಾಮನಗರ ಕರ್ಮಭೂಮಿ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 29, 2024 | 5:24 PM

ರಾಮನಗರದಿಂದ ನಾಲ್ಕು ಬಾರಿ ಮತ್ತು ಚನ್ನಪಟ್ಟಣದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾದಾಗಲೂ ತಾನು ಪ್ರಚಾರಕ್ಕೆ ಬಂದಿರಲಿಲ್ಲ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಪ್ರಚಾರ ಮಾಡಿಲ್ಲ, ಆದರೆ ಕುತಂತ್ರದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಹೋರಾಡಲು ತಾನು ಈ ಬಾರಿ ಪ್ರಚಾರಕ್ಕೆ ಬಂದಿರುವುದಾಗಿ ಕುಮಾರಸ್ವಾಮಿ ಹೇಳಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರದ ಸಿದ್ದೇಗೌಡನದೊಡ್ಡಿಯಲ್ಲಿ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ, ತಾನು ವಲಸಿಗನಲ್ಲ, ಹಾಸನದಲ್ಲಿ ಹುಟ್ಟಿದ್ದರೂ ರಾಜಕಾರಣದ ಬದುಕು ರೂಪುಗೊಂಡಿದ್ದು ರಾಮನಗರ ಜಿಲ್ಲೆಯಲ್ಲಿ, ತನ್ನ ಅಂತ್ಯ ಕೂಡ ಬಿಡದಿ ಹೋಬಳಿಯ ಕೇತನಹಳ್ಳಿಯಲ್ಲಿ ಸಂಭವಿಸಲಿದೆ ಎಂದು ಹೇಳಿದರು. ಇಟಲಿಯಲ್ಲ್ಲಿ ಜನಿಸಿದ ಸೋನಿಯಾ ಗಾಂಧಿ ಮಗಳು ಪ್ರಿಯಾಂಕಾ ಗಾಂಧಿಯನ್ನು ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧೆಗಿಳಿಸುವ ಕಾಂಗ್ರೆಸ್​ನವರಿಗೆ ತಾನು ರಾಮನಗರದಲ್ಲಿರೋದು ಕಣ್ಣು ಕುಕ್ಕುತ್ತಿದೆಯೇ? ಕನ್ನಡದ ಮಣ್ಣಲ್ಲಿ ಹುಟ್ಟಿದ ತಾನು ರಾಮನಗರಕ್ಕೆ ವಲಸಿಗನಾಗುತ್ತೇನೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಅನಿತಾ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸಲಾಗಿತ್ತು: ಕುಮಾರಸ್ವಾಮಿ