ರೈತರ ನೆಮ್ಮದಿ ಹಾಳು ಮಾಡಿದ ಜಮೀರ್ ಅಹ್ಮದ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಜರುಗಿಸಬೇಕು

ರೈತರ ನೆಮ್ಮದಿ ಹಾಳು ಮಾಡಿದ ಜಮೀರ್ ಅಹ್ಮದ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಜರುಗಿಸಬೇಕು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 29, 2024 | 3:50 PM

ಸಿದ್ದರಾಮಯ್ಯ ಹೇಳುವ ಮಾತನ್ನು ನಂಬುವುದಾದರೆ ನೋಟೀಸ್ ಗಳನ್ನು ಕಳಿಸಿ ರೈತರ ನೆಮ್ಮದಿ ಹಾಳು ಮಾಡಿದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಗೆ ಯಾವ ಶಿಕ್ಷೆಯನ್ನು ಮುಖ್ಯಮಂತ್ರಿ ನೀಡುತ್ತಾರೆ? ರೈತ ದೇಶದ ಬೆನ್ನೆಲುಬು ಅನ್ನೋದನ್ನು ಸರ್ಕಾರದಲ್ಲಿ ಯಾರೇ ಇದ್ದರೂ ಮರೆಯಬಾರದು. ರೈತ ನೊಂದರೆ ಇಡೀ ನಾಡು ನಲುಗುತ್ತದೆ.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರದಲ್ಲಿ ಯಾವುದೇ ರೈತನ ಜಮೀನು ವಕ್ಫ್ ಬೋರ್ಡ್​ಗೆ ಹೋಗಲ್ಲ ಎಂದು ಹೇಳಿದರು. ನಿನ್ನೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ, ರೈತರ ಜಮೀನು ವಕ್ಫ್ ಬೋರ್ಡ್​ಗೆ ಹೋಗಲ್ಲ ಎಂದು ಹೇಳಿದ್ದಾರೆ ಮತ್ತು ಯಾವುದಾದರೂ ರೈತನಿಗೆ ನೋಟೀಸ್ ಬಂದಿದ್ದರೆ ಅದನ್ನು ವಾಪಸ್ಸು ಕೊಡಲಿ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ