ಸಿಎಂ ರೇಸ್​ನಲ್ಲಿರುವ ಡಿಕೆ ಶಿವಕುಮಾರ್​ಗೆ ಅಭಯ!? ಬಲಗಡೆಯಿಂದ ಹೂ ನೀಡಿದ ಹಾಸನಾಂಬೆ

Updated on: Oct 15, 2025 | 9:30 AM

ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಪತ್ನಿ ಸಮೇತ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಹಾಸನಾಂಬೆ ದೇವಿ ಎರಡೆರಡು ಬಾರಿ ಬಲಗಡೆಯಿಂದ ಹೂವು ನೀಡಿದ್ದಾಳೆ. ಇದರಿಂದ, ದೇವಿಯ ಅಭಯ ಶಿವಕುಮಾರ್​ಗೆ ಸಿಕ್ಕಿತೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಹಾಸನ, ಅಕ್ಟೋಬರ್ 15: ಒಂದೆಡೆ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದರೆ ಮತ್ತೊಂದೆಡೆ, ಮಂಗಳವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದರು. ಡಿ.ಕೆ.ಶಿವಕುಮಾರ್​ ಪೂಜೆ ವೇಳೆ ಹಾಸನಾಂಬೆ ಬಲಗಡೆಯಿಂದ ಹೂವು ನೀಡಿದ್ದಾಳೆ. ಎರಡೆರಡು ಬಾರಿ ಹಾಸನಾಂಬೆ ದೇವಿಯ ಮೇಲಿಂದ ಬಲಗಡೆಯಿಂದ ಹೂವು ಬಿದ್ದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಹುದ್ದೆಯ ರೇಸ್​ನಲ್ಲಿರುವ ಡಿಕೆ ಶಿವಕುಮಾರ್​ಗೆ ಹಾಸನಾಂಬೆ ಅಭಯ ನೀಡಿದಳೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More