ಡಿಕೆ ಶಿವಕುಮಾರ್ಗೆ 16 ಲಕ್ಷ ರೂ. ಮೌಲ್ಯದ ಭರ್ಜರಿ ಗಿಫ್ಟ್: ಅಂಥದ್ದೇನಿದೆ ಇದರಲ್ಲಿ? ಇಲ್ಲಿದೆ ನೋಡಿ
ಕಾರವಾರದಲ್ಲಿ ನಡೆದ ‘ಕರಾವಳಿ ಉತ್ಸವ’ದಲ್ಲಿ ಭಾನುವಾರ ಭಾಗವಹಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರೂಪದ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಷ್ಣುವಿನ ವಿಶ್ವರೂಪ ದರ್ಶನದ ಶ್ರೀಗಂಧದಿಂದ ತಯಾರಿಸಿದ ಕಲಾಕೃತಿ ನೀಡಿದ್ದಾರೆ. ಇದು 16 ಲಕ್ಷ ರೂ. ಮೌಲ್ಯದ್ದಾಗಿದೆ. ಕಲಾಕೃತಿಯ ವಿಡಿಯೋ ಇಲ್ಲಿದೆ ನೋಡಿ.
ಕಾರವಾರ, ಡಿಸೆಂಬರ್ 29: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ‘ಕರಾವಳಿ ಉತ್ಸವ’ದಲ್ಲಿ ಭಾಗವಹಿಸಿದ ಡಿಸಿಎಂ ಡಿಕೆ ಶಿವಕುಮಾರ್ಗೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಭರ್ಜರಿ ಉಡುಗೊರೆ ನೀಡಿದ್ದಾರೆ. 16 ಲಕ್ಷ ರೂ. ಮೌಲ್ಯದ ಶ್ರೀಗಂಧದಿಂದ ತಯಾರಿಸಿದ ಭಗವಾನ್ ವಿಷ್ಣುವಿನ ವಿಶ್ವರೂಪ ದರ್ಶನದ ಕಲಾಕೃತಿ ನೀಡಿದ್ದಾರೆ. ಇದೇ ವೇಳೆ, ಡಿಕೆ ಶಿವಕುಮಾರ್ ಅವರ ಮನಸ್ಸಿನಲ್ಲಿರುವ ಎಲ್ಲಾ ಬಯಕೆಗಳು ಈಡೇರಲೆಂದು ಆಶಿಸುವೆ. ನಮಗೆ ಕೊಟ್ಟ ಆಶ್ವಾಸನೆ ಆದಷ್ಟು ಬೇಗ ಈಡೇರಿಸುವಂತಾಗಲೆಂದು ಹಾರೈಸಿ ಈ ಉಡುಗೊರೆ ನೀಡುತ್ತಿದ್ದೇನೆ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.