ಮೇಕೆದಾಟು ಬಗ್ಗೆ ಕುಮಾರಸ್ವಾಮಿ ಯೂಟರ್ನ್, ವಿಡಿಯೋ ಸಮೇತ ಟಾಂಗ್ ಕೊಟ್ಟ ಡಿಕೆಶಿ
ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸಹ ಜನಾಂದೋಲ ಸಭೆ ನಡೆಸಿದ್ದು, ಇಂದು ಮಂಡ್ಯದಲ್ಲಿ ನಡೆದ ಜನಾಂದೋನಲ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ದೋಸ್ತಿ ನಾಯಕರ ಆಡಿಯೋ ವಿಡಿಯೋ ಪ್ರದರ್ಶಿಸಿ ಲೇವಡಿ ಮಾಡಿದ್ದಾರೆ.
ಮಂಡ್ಯ, (ಆಗಸ್ಟ್ 06): ಮುಡಾ ಮತ್ತು ವಾಲ್ಮೀಕಿ ಹಗರಣ ಸಂಬಂಧ ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈಸೂರಿಗೆ ಪಾದಯಾತ್ರೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಸುತ್ತಿದೆ. ಅದರಂತೆ ಇಂದು(ಆಗಸ್ಟ್ 06) ಮಂಡ್ಯದಲ್ಲಿ ನಡೆದ ಜನಾಂದೋಲ ಸಭೆಯಲ್ಲಿ ಡಿಕೆ ಶಿವಕುಮಾರ್, ಜೆಡಿಎಸ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಅದರಲ್ಲೂ ಪ್ರಮುಖವಾಗಿ ನೇರವಾಗಿ ವಿಜಯೇಂದ್ರ ಮತ್ತು ಎಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಭಾಷಣ ನಡುವೆ ಮೈತ್ರಿ ಪಕ್ಷಗಳ ನಾಯಕರ ಭಿನ್ನಾಭಿಪ್ರಾಯದ ಹೇಳಿಕೆಗಳ ವಿಡಿಯೋಗಳನ್ನು ಪ್ಲೇ ಮಾಡಿಸಿ ಮಜಾ ತೆಗೆದುಕೊಂಡರು.
ಅಲ್ಲದೇ ಒಂದೇ ವಿಚಾರದಲ್ಲಿ ಎರಡೆರಡು ಹೇಳಿಕೆಗಳನ್ನ ಕೊಟ್ಟಿರುವ ಕುಮಾರಸ್ವಾಮಿ ಅವರ ನೀಡುರವ ವಿಡಿಯೋ ಬಿಡುಗಡೆ ಮಾಡಿ, ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ವಿಡಿಯೋ ತೋರಿಸಿ ನಮ್ಮನ್ನ ನಂಬಬೇಡಿ ಬಿಜೆಪಿ ಜೆಡಿಎಸ್ ನಾಯಕರನ್ನ ನಂಬಿ. ನಾನೇನು ಭಾಷಣ ಮಾಡಬೇಕಿಲ್ಲ ವಿಡಿಯೋಗಳೇ ಎಲ್ಲಾ ಹೇಳುತ್ತಿವೆ ಎಂದು ಟಾಂಗ್ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ