Ramesh Jarkiholi: ಡಿಕೆ ಶಿವಕುಮಾರ್ ಪತ್ನಿ ನನ್ನ ತಂಗಿ, ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಲಾರೆ: ರಮೇಶ್ ಜಾರಕಿಹೊಳಿ
ಗೋಕಾಕ ಸಮಾವೇಶದಲ್ಲಿ ಮಾತಾಡಿದ ಅವರು ಶಿವಕುಮಾರೆಡೆ ಬದಲಾದ ಧೋರಣೆಯನ್ನು ಪ್ರದರ್ಶಸಿದರು. ಶಿವಕುಮಾರ್ ಪತ್ನಿ ತಮ್ಮ ಸಹೋದರಿಯಂತೆ, ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವದಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಬೆಳಗಾವಿ: ಕಳೆದ ತಿಂಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ನೂರಾರು ಸಿಡಿಗಳು ತನ್ನಲ್ಲಿವೆ ಎಂದು ಸುದ್ದಿಗೋಷ್ಟಿಯೊಂದರಲ್ಲಿ ಹೇಳಿ ಅವುಗಳನ್ನು ಬಹಿರಂಗಗೊಳಿಸವುದಾಗಿ ಎರಡು ಬಾರಿ ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಿ ಬಂದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ತಮ್ಮ ವರಸೆ ಬದಲಾಯಿಸಿದಂತಿದೆ. ಗೋಕಾಕ್ ನಲ್ಲಿ ಇಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijay Sank lap Yatre) ಅಂಗವಾಗಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಮಾತಾಡಿದ ಅವರು ಶಿವಕುಮಾರೆಡೆ ಬದಲಾದ ಧೋರಣೆಯನ್ನು ಪ್ರದರ್ಶಸಿದರು. ಶಿವಕುಮಾರ್ ಪತ್ನಿ ತಮ್ಮ ಸಹೋದರಿಯಂತೆ, ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವದಿಲ್ಲ ಎಂದು ಹೇಳಿದರು. ಆಡಿಯೋ ಗುಣಮಟ್ಟ ಸರಿಯಿರದ ಕಾರಣ ಅವರು ಮಾತಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ