ಸರ್ಕಾರಕ್ಕೆ ಯಾವುದೇ ಅರ್ಥಿಕ ಸಂಕಷ್ಟವಿಲ್ಲ, ಎಲ್ಲವೂ ಸ್ಟ್ರೀಮ್ ಲೈನ್ ಆಗುತ್ತಿದೆ: ಡಿಕೆ ಶಿವಕುಮಾರ್

|

Updated on: Jul 11, 2024 | 8:18 PM

ದೆಹಲಿಯಿಂದ ಎಐಸಿಸಿಯ ಸತ್ಯಶೋಧನಾ ಕಮಿಟಿ ಬೆಂಗಳೂರಿಗೆ ಆಗಮಿಸಿರುವ ಬಗ್ಗೆ ಮಾತಾಡಿದ ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ಹಿನ್ನಡೆಯ ಅಧ್ಯಯನಕ್ಕಾಗಿ ಸಮಿತಿ ಬಂದಿದೆ, ಇವತ್ತು ಶಾಸಕರು, ಸಂಸದರು ಹಾಗೂ ಪದಾಧಿಕಾರಿಗಳೊಂದಿಗೆ ಮಾತಾಡಿದ್ದಾರೆ, ನಾಳೆಯೂ ರಾಜ್ಯದ ಮುಖಂಡರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು.

ಬೆಂಗಳೂರು: ನಾವು ಆಗಲೇ ಹೇಳಿದಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ, ಎಲ್ಲವನ್ನೂ ಸ್ಟ್ರೀಮ್ ಲೈನ್ ಮಾಡಲಾಗುತ್ತಿದೆ, ಹಿಂದೆ ಬಸವರಾಜ ಬೊಮ್ಮಾಯಿ ಅವರು ನೀಡಿದ ಅನುದಾನಗಳಿಗಿಂತ ಹೆಚ್ಚಿನ ಅನುದಾನವನ್ನು ತಮ್ಮ ಸರ್ಕಾರ ನೀಡಿದೆ, ಯಾವ ಬಾಬತ್ತಿನಲ್ಲೂ ಕೊರತೆ ಮಾಡಿಲ್ಲ ಎಂದರು. ತಮ್ಮ ಸರ್ಕಾರ ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಮುಖ್ಯ ಅಂಶವೆಂದರೆ ತಾವು ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿಲಿಲ್ಲ, ಬೆಲೆಗಳೆಲ್ಲ ಗಗನಕ್ಕೇರಿರುವ ಇವತ್ತಿನ ದಿನಗಳಲ್ಲಿ ಜನರಿಗೆ ಬದುಕು ನಡೆಸಲು ಸಹಾಯವಾಗಲಿ, ಅವರ ಬದುಕು ಹಸನಾಗಲಿ ಅಂತ ಅವುಗಳನ್ನು ಘೋಷಿಸಿ ಜಾರಿಗೆ ತರಲಾಗಿದೆ ಎಂದು ಶಿವಕುಮಾರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್

Follow us on