ನಿರಪರಾಧಿ ಅಂತ ಸಾಬೀತಾಗುವವರೆಗೆ ಶಿವಕುಮಾರ್ ಸಂಪುಟದಲ್ಲಿರಬಾರದು: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

|

Updated on: Oct 20, 2023 | 12:14 PM

ಹೈಕೋರ್ಟ್ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಹೇಳಿರುವುದರಿಂದ ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರಬರಬೇಕು, ನಿರಪರಾಧಿ ಅಂತ ಸಾಬೀತಾದರೆ ಮೂರು ತಿಂಗಳು ನಂತರ ಪುನಃ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದರು.

ರಾಯಚೂರು: ಬಿಜೆಪಿ ಉದ್ದೇಶಪೂರ್ವಕವಾಗ ತನಿಖಾ ಏಜೆನ್ಸಿಗಳನ್ನು ತನ್ನ ಹಿಂದೆ ಛೂ ಬಿಡುತ್ತಿದೆ ಎಂದು ಉಪ ಮುಖ್ಮಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದನ್ನು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಲೇವಡಿ ಮಾಡಿದರು. ಅದು ಶಿವಕುಮಾರ್ ತಂತ್ರಗಾರಿಕೆ ಮಾತ್ರ; ಬೇರೆಯವರ ಮೇಲೆ ಆರೋಪ ಬಂದಾಗ ಅವರು ಅಪರಾಧಿಗಳು ತನ್ನ ಮೇಲೆ ಬಂದಾಗ ಅದು ರಾಜಕಾರಣ ಅಂತ ಅವರು ಹೇಳುತ್ತಾರೆ. ಐಟಿ ದಾಳಿ (IT raids) ವೇಳೆ ಶಿವಕುಮಾರ್ ಮನೆಯಲ್ಲಿ ಕಂತೆ ಕಂತೆ ಅಕ್ರಮ ಹಣ, ಬಾಕ್ಸ್ ಗಟ್ಟಲೆ ದಾಖಲೆ ಪತ್ರಗಳ ದೃಶ್ಯಗಳನ್ನು ಮಾಧ್ಯಮಗಳು ಬಿತ್ತರಿಸಿದ್ದು ಕನ್ನಡಿಗರೆಲ್ಲ ನೋಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಮೊದಲ ವಿಚಾರಣೆಯಲ್ಲೇ ಅವರು ತಪ್ಪಿತಸ್ಥ ಅಂತ ಸಾಬೀತಾಗಿ ಜೈಲಿಗೆ ಕಳಿಸಲಾಯಿತು. ಜಾಮೀನು ಪಡೆದು ಜೈಲಿಂದ ಹೊರಬಂದ ಬಳಿಕ ನಾನು ಸಾಚಾ, ತಪ್ಪು ಮಾಡಿಲ್ಲ, ಟಾರ್ಗೆಟ್ ಮಾಡಲಾಗುತ್ತಿದೆ ಅಂದರೆ ಹೇಗೆ? ಎಂದು ಈಶ್ವರಪ್ಪ ಹೇಳಿದರು. ಹೈಕೋರ್ಟ್ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಹೇಳಿರುವುದರಿಂದ ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರಬರಬೇಕು, ನಿರಪರಾಧಿ ಅಂತ ಸಾಬೀತಾದರೆ ಮೂರು ತಿಂಗಳು ನಂತರ ಪುನಃ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ