ಅಖಿಲ ಭಾರತ ನೀರಾವರಿ ಮಂತ್ರಿಗಳ ಸಭೆಗೆ ತೆರಳುವ ಮುನ್ನ ಮೇಕೆದಾಟು, ಮಹದಾಯಿ ಬಗ್ಗೆ ಡಿಕೆಶಿ ಹೇಳಿದ್ದೇನು?
ಅಖಿಲ ಭಾರತ ನೀರಾವರಿ ಮಂತ್ರಿಗಳ ಸಭೆಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾಜಸ್ಥಾನಕ್ಕೆ ತೆರಳಿದರು. ಅದಕ್ಕೂ ಮುನ್ನ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಭೆಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎಂಬ ಮಾಹಿತಿ ನೀಡಿದರು. ವಿವರಗಳಿಗೆ ವಿಡಿಯೋ ನೋಡಿ.
ಬೆಂಗಳೂರು, ಫೆಬ್ರವರಿ 18: ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಅಖಿಲ ಭಾರತ ನೀರಾವರಿ ಮಂತ್ರಿಗಳ ಸಭೆಗೆ ರಾಜಸ್ಥಾನಕ್ಕೆ ತೆರಳುವ ಮುನ್ನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಡ್ಯಾಂಗಳನ್ನು ದುರಸ್ತಿ ಮಾಡಬೇಕಿದೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಕೇಂದ್ರದ ಸಹಕಾರ ಕೋರಬೇಕಿದೆ. ಎಲ್ಲ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡುವೆ ಎಂದರು. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.