ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಫಿಲ್ಮ್ ಚೇಂಬರ್ನಲ್ಲಿ ಮತ್ತೆ ಗುಡುಗಿದ ಡಿಕೆಶಿ
ಈ ಮೊದಲು ಕನ್ನಡ ಚಿತ್ರರಂಗದ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ್ದ ಒಂದು ಹೇಳಿಕೆ ಬಹಳ ಸುದ್ದಿಯಾಗಿತ್ತು. ಅದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದರು. ಈಗ ಮತ್ತೆ ಕನ್ನಡ ಚಿತ್ರರಂಗ ಬಗ್ಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಡಾ. ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಫಿಲ್ಮ್ ಚೇಂಬರ್ನಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಡಿಕೆ ಶಿವಕುಮಾರ್ ಮಾತನಾಡಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಈ ಮೊದಲು ಚಿತ್ರರಂಗದ ಬಗ್ಗೆ ನೀಡಿದ್ದ ‘ನಟ್ಟು ಬೋಲ್ಟು’ ಹೇಳಿಕೆ ಸಖತ್ ಸುದ್ದಿ ಆಗಿತ್ತು. ಅದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದರು. ಈಗ ಡಿಕೆ ಶಿವಕುಮಾರ್ ಅವರು ಮತ್ತೆ ಕನ್ನಡ ಚಿತ್ರರಂಗದ (Kannada Film Industry) ಬಗ್ಗೆ ಮಾತನಾಡಿದ್ದಾರೆ. ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಡಿಕೆಶಿ ಮಾತನಾಡಿದರು. ‘ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಗೌರವ ಬಂದಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು. ಮಧ್ಯದಲ್ಲಿ ಕೆಲವರು ಚಿಲ್ಲರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚಿತ್ರರಂಗದಲ್ಲಿ ಇಲ್ಲದವರು, ನಿವೃತ್ತಿ ಹೊಂದಿದವರೆಲ್ಲ ಮಾತನಾಡಲು ಶುರು ಮಾಡಿದ್ದಾರೆ. ಮಾತನಾಡುವವರೆಲ್ಲ ಮೊದಲು ಚಿತ್ರರಂಗವನ್ನು ಉಳಿಸಿ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
