ವೇದಿಕೆಯ ಮೇಲೆ ಪಠ್ಯಪುಸ್ತಕ ಪ್ರತಿ ಹರಿದು ಬಿಸಾಕಿದ ಡಿಕೆ ಶಿವಕುಮಾರ್
ಪರಿಷ್ಕೃತ ಪಠ್ಯಪುಸ್ತಕ ಬದಲಿಸಿದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಫ್ರೀಡಂಪಾರ್ಕ್ನಲ್ಲಿ ಮಾತನಾಡಿದ ಡಿಕೆಶಿ, 12 ತಿಂಗಳ ನಂತರ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಆಗ ಪರಿಷ್ಕೃತ ಪಠ್ಯಪುಸ್ತಕವನ್ನು ತೆಗೆದುಹಾಕುತ್ತೇವೆ ಎಂದು ಹೇಳಿದರು.
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಇಂದು (ಜೂನ್ 18) ಫ್ರೀಡಂಪಾರ್ಕ್ನಲ್ಲಿ (Freedom Park) ಧರಣಿ ನಡೆಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ವೇದಿಕೆಯ ಮೇಲೆ ಪಠ್ಯಪುಸ್ತಕ ಪ್ರತಿ ಹರಿದು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದರು. ಪರಿಷ್ಕೃತ ಪಠ್ಯಪುಸ್ತಕ ಬದಲಿಸಿದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಫ್ರೀಡಂಪಾರ್ಕ್ನಲ್ಲಿ ಮಾತನಾಡಿದ ಡಿಕೆಶಿ, 12 ತಿಂಗಳ ನಂತರ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಆಗ ಪರಿಷ್ಕೃತ ಪಠ್ಯಪುಸ್ತಕವನ್ನು ತೆಗೆದುಹಾಕುತ್ತೇವೆ ಎಂದು ಹೇಳಿದರು. ಇನ್ನು ಧರಣಿಯಲ್ಲಿ ಪ್ರತಿಭಟನಾಕಾರರು ಆರ್ಎಸ್ಎಸ್ ಚಡ್ಡಿ ಸುಡಲು ಮುಂದಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ವಿರೋಧದ ನಡುವೆಯೂ ಆರ್ಎಸ್ಎಸ್ ಚಡ್ಡಿಗೆ ಬೆಂಕಿ ಹಾಕಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ತಾಜಾ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
