ಪಿಯು ಕಲಾ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುವ ಸಾನಿಕಾಗೆ ಲಾಯರ್ ಆಗಿ ಹೆಸರು ಮಾಡುವಾಸೆ
ವಕೀಲೆಯಾಗಿ, ಲೀಗಲ್ ಅಡ್ವೈಸರ್ ಆಗಿ ದೊಡ್ಡ ಹೆಸರು ಮಾಡುವ ಕನಸನ್ನು ಸಾನಿಕಾ ಹೊತ್ತಿದ್ದಾಳೆ. ಸಾನಿಕಾಳ ಶಿಕ್ಷಕರು ಮತ್ತು ತಾಯಿ ಅವಳ ಸಾಧನೆಯನ್ನು ಕೊಂಡಾಡಿದರು.
Hubballi: ಹುಬ್ಬಳ್ಳಿ ಹುಡುಗಿ ಸಾನಿಕಾ (Sanika) ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಱಂಕ್ ಗಿಟ್ಟಿಸಿ ತನ್ನ ಕಾಲೇಜಿಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಈ ಸಂದರ್ಭದಲ್ಲಿ ಟಿವಿ9 ಕನ್ನಡ ವಾಹಿನಿಯ ಹುಬ್ಬಳ್ಳಿಯ ವರದಿಗಾರರೊಂದಿಗೆ ಮಾತಾಡಿದ ಸಾನಿಕಾ ತನಗೆ ಱಂಕ್ ಬರುವ ನಿರೀಕ್ಷೆ ಇರಲಿಲ್ಲ ಎಂದು ಹೇಳಿದಳು. ತನ್ನ ಸಾಧನೆಗೆ ನೆರವಾದ ಕಾಲೇಜಿನ ಉಪನ್ಯಾಸಕರಿಗೆ (lecturers) ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ ಅವಳು ತಂದೆತಾಯಿಗಳ ಬೆಂಬಲ ಮತ್ತು ನೈತಿಕ ಸ್ಥೈರ್ಯವನ್ನು (moral support) ಸಹ ನೆನೆಪಿಸಿಕೊಂಡಳು. ವಕೀಲೆಯಾಗಿ, ಲೀಗಲ್ ಅಡ್ವೈಸರ್ ಆಗಿ ದೊಡ್ಡ ಹೆಸರು ಮಾಡುವ ಕನಸನ್ನು ಸಾನಿಕಾ ಹೊತ್ತಿದ್ದಾಳೆ. ಸಾನಿಕಾಳ ಶಿಕ್ಷಕರು ಮತ್ತು ತಾಯಿ ಅವಳ ಸಾಧನೆಯನ್ನು ಕೊಂಡಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos