ಹಳ್ಳದಲ್ಲಿ ಸಿಲುಕಿದ ಕೆಎಸ್​ಆರ್​ಟಿಸಿ ಬಸ್: 22 ಪ್ರಯಾಣಿಕರನ್ನು ರಕ್ಷಿಸಿದ ರೋಚಕ ಕಾರ್ಯಚರಣೆ ಹೇಗಿತ್ತು ಗೊತ್ತಾ? ​

ಅಗ್ನಿ ಶಾಮಕ ದಳ ಸಿಬ್ಬಂದಿ ಸ್ವಲ್ಪ ತಡವಾಗಿದ್ದರು ಭಾರಿ ದುರಂತ ಸಂಭವಿಸುತ್ತಿತ್ತು. ಅಗ್ನಿ ಶಾಮಕದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ 22 ಜನ ಜಚಾವ್ ಆಗಿದ್ದಾರೆ. ಕತ್ತಲಲ್ಲಿ ರೋಚಕ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 19, 2022 | 11:40 AM

ಗದಗ: ಜಿಲ್ಲೆಯ ಹಲವಡೆ ರಾತ್ರಿಯಿಡೀ ಭಾರಿ ಮಳೆ (Rain) ಯಾದ ಪರಿಣಾಮ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸರ್ಕಾರಿ ಬಸ್ (KSRTC bus) ಸಿಲುಕಿ 22 ಜನ ಪ್ರಯಾಣಿಕರು ಪರದಾಡಿದ್ದು, ಸ್ವಲ್ಪದರಲ್ಲೇ ಭಾರಿ ದುರಂತ ಒಂದು ತಪ್ಪಿದೆ. ಜಿಲ್ಲೆಯ ರೋಣ ತಾಲೂಕಿನ ಇಟಗಿಯಿಂದ ಸೂಡಿ ಹೋಗುವ ಮಾರ್ಗ ಮಧ್ಯೆ ಹಳ್ಳದಲ್ಲಿ ಸಾರಿಗೆ ಬಸ್ ಸಿಕ್ಕಿಹಾಕಿಕೊಂಡಿದೆ. ಸಕಾಲಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, 10 ಜನ ಪುರುಷರು, ಇಬ್ಬರು ಮಕ್ಕಳು, 6 ಮಹಿಳೆಯರು, ನಿರ್ವಾಹಕ ಮತ್ತು ಡ್ರೈವರ್ ಸೇರಿ ಒಟ್ಟು 22 ಜನರನ್ನು ಸುರಕ್ಷಿತವಾಗಿ ಯಾವುದೇ ಪ್ರಾಣಾಪಾಯವಿಲ್ಲದೆ ರಕ್ಷಣೆ ಮಾಡಿದ್ದಾರೆ. ಹಳ್ಳದ ರಭಸಕ್ಕೆ ಬಸ್ ಅಲುಗಾಡಿದ್ದು, ಅರ್ಧದಷ್ಟು ಬಸ್ ಹಳ್ಳದಲ್ಲಿ ಮುಳುಗಿದೆ. ಮುಂದಿನ ಗ್ಲಾಸ್ ಒಡೆದು ಏಣಿ ಮೂಲಕ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ವಲ್ಪ ತಡವಾಗಿದ್ದರು ಭಾರಿ ದುರಂತ ಸಂಭವಿಸುತ್ತಿತ್ತು. ಅಗ್ನಿ ಶಾಮಕದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ 22 ಜನ ಜಚಾವ್ ಆಗಿದ್ದಾರೆ. ಕತ್ತಲಲ್ಲಿ ರೋಚಕ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Air Pollution: ಮನೆಯ ಒಳಗೆ ಗಾಳಿಯ ಗುಣಮಟ್ಟ ಸುಧಾರಿಸುವುದು ಹೇಗೆ?

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada