ಕಂಪ್ಲಿಯ ಐತಿಹಾಸಿಕ ಕೋಟೆಯಲ್ಲಿ 800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ 39 ಪಿರಂಗಿ ಗುಂಡುಗಳು ಪತ್ತೆ..!

ಕಂಪ್ಲಿಯ ಐತಿಹಾಸಿಕ ಕೋಟೆಯಲ್ಲಿ 800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ 39 ಪಿರಂಗಿ ಗುಂಡುಗಳು ಪತ್ತೆ..!

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2022 | 12:44 PM

ಕೋಟೆಯ ಮೇಲ್ಭಾಗದ ಸಂರಕ್ಷಣ ಕಾಮಗಾರಿ ಸಂದರ್ಭದಲ್ಲಿ ಮಣ್ಣಿನಲ್ಲಿ ಹುದಗಿದ 39 ಗುಂಡುಗಳನ್ನು ಸಂರಕ್ಷಿಸಲಾಗಿದ್ದು, ತಲಾ 150 ತೂಕ ಇವೆ. ವಿಜಯನಗರ ಅರಸರ ಕಾಲದಲ್ಲಿ ಕೋಟೆ ರಕ್ಷಣೆಗೆ ಬಳಸಲಾಗುತ್ತಿತ್ತು.

ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಐತಿಹಾಸಿಕ (Historical) ಗಂಡುಗಲಿ ಕುಮಾರರಾಮನ ಕೋಟೆ ಮಹಾದ್ವಾರದ ಸಂರಕ್ಷಣಾ ಕಾಮಗಾರಿ ಸಂದರ್ಭದಲ್ಲಿ 800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ 39 ಫಿರಂಗಿ ಗುಂಡುಗಳು (Cannon Bullets) ಪತ್ತೆಯಾಗಿವೆ. ವಿಷಯ ತಿಳಿದು ಕಮಲಾಪುರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ಡಾ.ಮಂಜನಾಥ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಅವರು ಪ್ರತಿಕ್ರಿಯಿಸಿದ್ದು, ಕೋಟೆಯ ಮೇಲ್ಭಾಗದ ಸಂರಕ್ಷಣ ಕಾಮಗಾರಿ ಸಂದರ್ಭದಲ್ಲಿ ಮಣ್ಣಿನಲ್ಲಿ ಹುದಗಿದ 39 ಗುಂಡುಗಳನ್ನು ಸಂರಕ್ಷಿಸಲಾಗಿದ್ದು, ತಲಾ 150 ತೂಕ ಇವೆ ಎಂದು ತಿಳಿಸಿದ್ದಾರೆ. ಈ ಫಿರಂಗಿ ಗುಂಡುಗಳು ವಿಜಯನಗರ ಅರಸರ ಕಾಲದಲ್ಲಿ ಕೋಟೆ ರಕ್ಷಣೆಗೆ ಬಳಸಲಾಗುತ್ತಿತ್ತು. ಕೋಟೆಯ ಮೇಲ್ಬಾಗದ ತೆನೆ ಆಕಾರದ ಕಿಂಡಿಗಳ ಮೂಲಕ ಕಾವಲಿಗಾಗಿ ಬಾಗಿಲ ಮತ್ತು ಬಳಿಯಲಿರುವ ತೆನೆ ಆಕಾರದ ಕಿಂಡಿಗಳಿಂದಲೂ ಹಾರಿಸಲು ಈ ಗುಂಡುಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಿದರು. ಕೋಟೆ ಸಂರಕ್ಷಣಾ ಕಾಮಗಾರಿಯಲ್ಲಿ ದೊರೆತ 39 ಪಿರಂಗಿ ಗುಂಡುಗಳನ್ನು ಕಮಲಾಪುರದ ಪುರಾತತ್ವ ಇಲಾಖೆಯ ಸಂಗ್ರಹಾಲಯಕ್ಕೆ ಒಪ್ಪಿಸಲಾಗುವುದು ಎಂದು ಕಲಬುರಗಿ ವಿಭಾಗದ ಮೈಸೂರು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕ ಚಂದ್ರಶೇಖರ್ ಮಸಳಿ ತಿಳಿಸಿದರು.

ವರದಿ: ವೀರಪ್ಪ ದಾನಿ. ಬಳ್ಳಾರಿ

ಇದನ್ನೂ ಓದಿ: ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ; ಸರ್ಕಾರದ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಕೆಂಡಾಮಂಡಲ

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.