ಸತೀಶ್ ಜಾರಕಿಹೊಳಿ ಮನೆಗೆ ಡಿಕೆ ಶಿವಕುಮಾರ್ ಆಗಮಿಸಿದ್ದು ಕದನ ವಿರಾಮ ಘೋಷಣೆಗಾ?

|

Updated on: Nov 07, 2023 | 1:39 PM

ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಸತೀಶ್ ಮತ್ತು ಶಿವಕುಮಾರ್ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಸಾರ್ಟ್ ಔಟ್ ಮಾಡುವ ಕಾರ್ಯ ಪ್ರಾಯಶಃ ಗೃಹ ಸಚಿವ ಜಿ ಪರಮೇಶ್ವರ ಮಾಡಿದ್ದಾರೆ ಅನಿಸುತ್ತದೆ. ಸತೀಶ್ ಕೆಲವು ಸಲ ಪರಮೇಶ್ವರ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲ್ಲಿಗೆ ಹೋಗಿ ಪರಮೇಶ್ವರ್ ಹಾಗೂ ಸತೀಶ್ ಜೊತೆ ಡಿನ್ನರ್ ಮಾಡಿದ್ದರು.

ಬೆಂಗಳೂರು: ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗುವ ಲಕ್ಷಣಗಳಂತೂ ಇಲ್ಲ; ಹಾಗೆಯೇ, ರಷ್ಯ ಮತ್ತು ಉಕ್ರೇನ್ ನಡುವೆ ಎರಡು ವರ್ಷಗಳಿಂದ ಜಾರಿಯಲ್ಲಿರುವ ಯುದ್ಧ ನಿಲ್ಲುವ ಲಕ್ಷಣಗಳು ಇಲ್ಲವೇ ಇಲ್ಲ, ಅದರೆ ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಶುರುವಾಗಿದ್ದ ಶೀತಲ ಸಮರಕ್ಕೆ ಕದನ ವಿರಾಮ (ceasefire) ಘೋಷಣೆಯಾದಂತಿದೆ! ಕಳೆದ ರಾತ್ರಿ ಸ್ವಲ್ಪ ಸಮಯ ಬಿಬಿಎಂಪಿ ವಾರ್ ರೂಮಲ್ಲಿದ್ದ ಶಿವಕುಮಾರ್ ಬೆಳಗ್ಗೆ ಮನೆಯಿಂದ ಹೊರಟು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಮನೆ ತಲುಪಿದರು. ರಾಜ್ಯ ಕಾಂಗ್ರೆಸ್ ನ ಇಬ್ಬರು ಹಿರಿಯ ನಾಯಕರ ನಡುವೆ ಮಾತುಕತೆ ನಡೆಯಿತು, ವಿವರಗಳು ಗೊತ್ತಾಗಿಲ್ಲ. ಯಾಕೆಂದರೆ ಇಬ್ಬರೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಲಿಲ್ಲ. ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಸತೀಶ್ ಮತ್ತು ಶಿವಕುಮಾರ್ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಸಾರ್ಟ್ ಔಟ್ ಮಾಡುವ ಕಾರ್ಯ ಪ್ರಾಯಶಃ ಗೃಹ ಸಚಿವ ಜಿ ಪರಮೇಶ್ವರ ಮಾಡಿದ್ದಾರೆ ಅನಿಸುತ್ತದೆ. ಸತೀಶ್ ಕೆಲವು ಸಲ ಪರಮೇಶ್ವರ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲ್ಲಿಗೆ ಹೋಗಿ ಪರಮೇಶ್ವರ್ ಹಾಗೂ ಸತೀಶ್ ಜೊತೆ ಡಿನ್ನರ್ ಮಾಡಿದ್ದರು. ಇವತ್ತು ಶಿವಕುಮಾರ್ ತೆರಳುವಾಗ ವಿದಾಯ ಹೇಳಲು ಸತೀಶ್ ಕಾರಿನವರೆಗೆ ಬಂದು ಕೈ ಕುಲುಕುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ