ಡಿಕೆ ಶಿವಕುಮಾರ್ ಆದಷ್ಟು ಬೇಗ ಸಿಎಂ ಆಗ್ತಾರೆ: ದೈವ ಭವಿಷ್ಯ, ವಿಡಿಯೋ ನೋಡಿ

Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2025 | 5:09 PM

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ತುಳುನಾಡ ದೈವ ಡಿ.ಕೆ.ಶಿವಕುಮಾರ್ ಅವರು ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆಂದು ಭವಿಷ್ಯ ನುಡಿದಿದೆ. ಡಿಸಿಎಂ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ದೈವ, ಕೆಲವು ವಿಚಾರಗಳನ್ನು ಈಗಾಗಲೇ ಡಿಕೆ ಶಿವಕುಮಾರ್​​ಗೆ ತಿಳಿಸಿರುವುದಾಗಿ ಹೇಳಿದೆ.

ತುಮಕೂರು, ನವೆಂಬರ್​ 08: ಆದಷ್ಟು ಬೇಗ ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗುತ್ತಾರೆಂದು ತುಳುನಾಡ ದೈವ ಭವಿಷ್ಯ ನುಡಿದಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದೇಶ್ವರ ಸನ್ನಿಧಿಯಲ್ಲಿ ನಡೆದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ದೈವ, ಈಗಾಗಲೇ ಭವಿಷ್ಯ ನುಡಿದು ಆಗಿದೆ, ಆದಷ್ಟು ಬೇಗ ಸಿಎಂ ಸ್ಥಾನಕ್ಕೆ ಏರಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.