ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಸುರೇಶ್ ಜೊತೆಗಿದ್ದರೂ ಮಾತಿಲ್ಲ ಕತೆಯಿಲ್ಲ!
ಕುಮಾರಸ್ವಾಮಿ ಮತ್ತು ಸುರೇಶ್ ನಡುವೆ ಇರುವ ವೈರತ್ವ ಎಲ್ಲರಿಗೂ ಗೊತ್ತಿರವಂಥದ್ದೇ. ಸ್ವಾಮೀಜಿಗಳ ಸಮ್ಮುಖದಲ್ಲಿ ಅವರಿಬ್ಬರು ವೇದಿಕೆ ಮೇಲೆ ಜೊತೆಯಾಗಿದ್ದರೂ ನಾನೊಂದು ತೀರ ನೀನೊಂದು ತೀರದ ಹಾಗಿದ್ದರು. ಈ ವಿದ್ಯಮಾನವನ್ನು ತೇಜಸ್ವೀ ಸೂರ್ಯ ಎಂಜಾಯ್ ಮಾಡಿರುತ್ತಾರೆ.
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿರರುವ ಮುದಗೆರೆ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು (Chamundeshwari Medical College), ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು. ದೃಶ್ಯಗಳಲ್ಲ ನೀವು ನೋಡುತ್ತಿರುವ ಹಾಗೆ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು (Sri Nirmalananda Swamiji) ಶಿಲಾನ್ಯಾಸಗಳನ್ನು ಅನಾವರಣಗೊಳಿಸಿದರು. ಸಮಾರಂಭದ ಸ್ವಾರಸ್ಯಕರ ಸಂಗತಿಯೆಂದರೆ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ವೇದಿಕೆ ಮೇಲಿದ್ದರು. ಕಾಂಗ್ರೆಸ್ ಮತ್ತು ಸ್ಥಳೀಯ ಸಂಸದ ಡಿಕೆ ಸುರೇಶ್ (DK Suresh) ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ (Tejasvi Surya) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಇಲ್ಲಿ ನೋಡಬಹುದು. ಪ್ರತಿ ಶಿಲಾನ್ಯಾಸ ಅನಾವರಣ ಮಾಡುವಾಗ ಸ್ವಾಮೀಜಿಯವರು ಈ ಮೂವರನ್ನೂ ಮುಂದೆ ಬಂದು ಆ ಕಾರ್ಯ ನೆರವೇರಿಸುವಂತೆ ಆಹ್ವಾನಿಸುತ್ತಾರೆ ಆದರೆ ಮೂವರಲ್ಲಿ ಒಬ್ಬರು ಕೂಡ ಮುಂದೆ ಹೋಗಲ್ಲ. ಸ್ವಾಮೀಜಿ ನೀವೇ ನೆರವೇರಿಸಿ ಅಂತ ಹೇಳುತ್ತಾರೆ! ಕುಮಾರಸ್ವಾಮಿ ಮತ್ತು ಸುರೇಶ್ ನಡುವೆ ಇರುವ ವೈರತ್ವ ಎಲ್ಲರಿಗೂ ಗೊತ್ತಿರವಂಥದ್ದೇ. ಸ್ವಾಮೀಜಿಗಳ ಸಮ್ಮುಖದಲ್ಲಿ ಅವರಿಬ್ಬರು ವೇದಿಕೆ ಮೇಲೆ ಜೊತೆಯಾಗಿದ್ದರೂ ನಾನೊಂದು ತೀರ ನೀನೊಂದು ತೀರದ ಹಾಗಿದ್ದರು. ಈ ವಿದ್ಯಮಾನವನ್ನು ತೇಜಸ್ವೀ ಸೂರ್ಯ ಎಂಜಾಯ್ ಮಾಡಿರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Mon, 6 November 23