RSS ಪಥ ಸಂಚಲನಕ್ಕೆ ವಿರೋಧವಿಲ್ಲ ಎಂದ ಡಿಕೆ ಸುರೇಶ್: ಮುಂದಿಟ್ಟ ಷರತ್ತು ಏನು ನೋಡಿ!
ಆರ್‌ಎಸ್‌ಎಸ್ ಪಥಸಂಚಲನದ ಕುರಿತು ಸರ್ಕಾರಕ್ಕೆ ಕೋರ್ಟ್ ಹಿನ್ನಡೆಯಾಗಿದೆ. ಸರ್ಕಾರಿ ಜಾಗಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಡಿ.ಕೆ. ಸುರೇಶ್ ಮಾತನಾಡಿ, ಪಥಸಂಚಲನಕ್ಕೆ ವಿರೋಧವಿಲ್ಲ, ಆದರೆ ಲಾಠಿ ಹಿಡಿದು ಸಾಗುವುದಕ್ಕೆ ವಿರೋಧವಿದೆ ಎಂದರು. ಬೇರೆ ಸಂಘಟನೆಗಳು ಲಾಠಿ ಹಿಡಿದರೆ ಅವಕಾಶ ನೀಡುತ್ತೀರಾ ಎಂದು ಪ್ರಶ್ನಿಸಿದರು.
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ವಿಚಾರವಾಗಿ ಸರ್ಕಾರಕ್ಕೆ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ. ಸುರೇಶ್, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಯಾರ ವಿರೋಧವೂ ಇಲ್ಲ, ಆದರೆ ಲಾಠಿ ಹಿಡಿದು ಮಾರ್ಚ್ ಮಾಡುವುದಕ್ಕೆ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲಾಠಿ ಹಿಡಿದುಕೊಂಡು ಪಥಸಂಚಲನ ಮಾಡುವ ಸಂಸ್ಕೃತಿ ಹಿಂದಿನ ಕಾಲದಲ್ಲಿ ಸರಿ ಎನಿಸಿರಬಹುದು. ಆದರೆ ಬೇರೆ ಸಮುದಾಯಗಳು ಅಥವಾ ಸಂಘಟನೆಗಳು ಅದೇ ರೀತಿ ಲಾಠಿ ಹಿಡಿದುಕೊಂಡು ಓಡಾಡಲು ಅವಕಾಶ ನೀಡಲಾಗುವುದೇ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಸ್ಪಷ್ಟನೆ ಬೇಕು ಎಂದು ಅವರು ಆಗ್ರಹಿಸಿದರು.
Latest Videos

