ಸಿದ್ದರಾಮಯ್ಯಗೆ ಕೊಟ್ಟ ಮಾತು ನೆನಪಿಸಿದ್ರಾ ಡಿಕೆ ಸುರೇಶ್, ಏನಿದು ಮಾರ್ಮಿಕ ಮಾತಿನ ಅರ್ಥ?​

Updated on: Nov 20, 2025 | 2:43 PM

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಗದ್ದುಗೆ ಏರಿದಾಗಿನಿಂದಲೂ ಪವರ್ ಶೇರಿಂಗ್ ವಿಚಾರ ಚರ್ಚೆಯಾಗುತ್ತಲೇ ಇದೆ. ಇತ್ತ 50:50 ಶೇರಿಂಗ್ ಪಾಲಿಟಿಕ್ಸ್​ ಎಂದು ಬಿಜೆಪಿಯವರು (BJP) ವ್ಯಂಗ್ಯ ಮಾಡುತ್ತಲೇ ಇದ್ದಾರೆ. ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡುತ್ತಾರೆ. ಉಳಿದ ಎರಡುವರೆ ವರ್ಷ ಡಿಕೆಶಿ ಸಿಎಂ ಆಗುತ್ತಾರೆ. ಎನ್ನುವ ಮಾತು ಕೇಳಿ ಬಂದಿತ್ತು. ಅದರಂತೆ ಸಿಎಂ ಸ್ಥಾನಕ್ಕೇರಲು ಡಿಕೆ ಶಿವಕುಮಾರ್ (DK Suresh) ಕೂಡ ನಾನಾ ಪ್ರಯತ್ನ ಮಾಡ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಡಿಕೆ ಬ್ರದರ್, ಮಾಜಿ ಸಂಸದ​ ಸುರೇಶ್ , ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ ಎನ್ನುತ್ತಾ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ನವೆಂಬರ್.20): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಗದ್ದುಗೆ ಏರಿದಾಗಿನಿಂದಲೂ ಪವರ್ ಶೇರಿಂಗ್ ವಿಚಾರ ಚರ್ಚೆಯಾಗುತ್ತಲೇ ಇದೆ. ಇತ್ತ 50:50 ಶೇರಿಂಗ್ ಪಾಲಿಟಿಕ್ಸ್​ ಎಂದು ಬಿಜೆಪಿಯವರು (BJP) ವ್ಯಂಗ್ಯ ಮಾಡುತ್ತಲೇ ಇದ್ದಾರೆ. ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡುತ್ತಾರೆ. ಉಳಿದ ಎರಡುವರೆ ವರ್ಷ ಡಿಕೆಶಿ ಸಿಎಂ ಆಗುತ್ತಾರೆ. ಎನ್ನುವ ಮಾತು ಕೇಳಿ ಬಂದಿತ್ತು. ಅದರಂತೆ ಸಿಎಂ ಸ್ಥಾನಕ್ಕೇರಲು ಡಿಕೆ ಶಿವಕುಮಾರ್ (DK Suresh) ಕೂಡ ನಾನಾ ಪ್ರಯತ್ನ ಮಾಡ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಡಿಕೆ ಬ್ರದರ್, ಮಾಜಿ ಸಂಸದ​ ಸುರೇಶ್ , ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡರೆ ಅವರು ನಾಯಕರಾಗುತ್ತಾರೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ.

Published on: Nov 20, 2025 02:41 PM