ಬೆಳಗಾವಿ ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶೆಟ್ಟರ್​​ರನ್ನು ಆಹ್ವಾನಿಸಿದ್ದಕ್ಕೆ ಸಮರ್ಥನೆ ನೀಡಿದ ಶಿವಕುಮಾರ್

|

Updated on: Jan 17, 2025 | 8:23 PM

ದಲಿತ ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ಶಿವಕುಮಾರ್ ಒತ್ತಡದ ಮೇರೆಗೆ ರದ್ದಾಯಿತು, ಎಂದು ಬೇಸರ ಮಾಡಿಕೊಂಡಿರುವ ಸತೀಶ್ ಜಾರಕಿಹೊಳಿ ಕೆಲ ಶಾಸಕರೊಂದಿಗೆ ದುಬೈ ಪ್ರವಾಸ ಹೊರಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ನೀಡದ ಶಿವಕುಮಾರ್ ಯಾರು ಏನು ಬೇಕಾದರೂ ಮಾತಾಡಿಕೊಳ್ಳಲಿ, ತನಗೂ ಇದಕ್ಕೂ ಸಂಬಂಧವಿಲ್ಲ, ಸುರ್ಜೆವಾಲಾ ಇಲ್ಲೇ ಇದ್ದಾರೆ ಅವರನ್ನೇ ಕೇಳಿ ಎಂದರು.

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಎಐಸಿಸಿ ಅಧಿವೇಶನ ಶತಮಾನೋತ್ಸವ ಆಚರಣೆಗೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಅಹ್ವಾನಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದರು. ಇದೊಂದು ಸರ್ಕಾರೀ ಕಾರ್ಯಕ್ರಮ, ಮಹಾತ್ಮಾ ಗಾಂಧಿ ಹಾಗೂ ಡಾ ಬಿಅರ್ ಅಂಬೇಡ್ಕರ್ ಎಲ್ಲರಿಗೂ ಸೇರಿದವರು, ಸಂವಿಧಾನ ಪ್ರತಿಯೊಬ್ಬ ಭಾರತೀಯನ ಆಸ್ತಿ, ಹಾಗಾಗಿ ಶೆಟ್ಟರ್ ಅವರೊಂದಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಅವರನ್ನೂ ಆಹ್ವಾನಿಸಲಾಗಿದೆ, ತಮ್ಮ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಬಿಜೆಪಿಯವರನ್ನು ಬಿಟ್ಟು ಯಾರೂ ಬೇಕಾದರೂ ಬರಬಹುದು, ಮಾಧ್ಯಮದವರೂ ಬರಬಹುದು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ: ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್