ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುವ ಪದ್ಧತಿ ನಡೆದುಕೊಂಡು ಬಂದಿದೆ. ಯಾರ ದೃಷ್ಟಿಯೂ ತಾಗದಿರಲಿ ಎಂದು ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುತ್ತಾರೆ. ಮಗುವಿನ ಮುಖ ನೋಡಿದ ತಕ್ಷಣ ಹಣೆ, ಎರಡು ಕೆನ್ನೆ, ಗಲ್ಲದಲ್ಲಿ ದೊಡ್ಡ ಕಪ್ಪು ಬೊಟ್ಟೇ ಎದ್ದು ಕಾಣಿಸುತ್ತದೆ. ಇದರಿಂದ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಇದೆ.
ಕಪ್ಪು ಬಣ್ಣಕ್ಕೆ ದೃಷ್ಟಿಯನ್ನು ತಡೆಯುವ ಶಕ್ತಿ ಇದೆ ಎನ್ನಲಾಗುತ್ತೆ. ಹೀಗಾಗಿಯೇ ಪುಟ್ಟ ಮಕ್ಕಳಿಗೆ ದೃಷ್ಟಿ ಇಡುವ ಸಂಪ್ರದಾಯವಿದೆ. ಮುಂದಾಗಿ ಕಾಣುವ ಮಕ್ಕಳನ್ನು ನೋಡುವುದೇ ಚಂದ. ಮಕ್ಕಳಿಗೆ ಬೇಗ ದೃಷ್ಟಿಯಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳಿಗೆ ದೃಷ್ಟಿ ಬೊಟ್ಟನ್ನು ಇಡುತ್ತಾರೆ. ಈ ರೀತಿ ದೃಷ್ಟಿ ಬೊಟ್ಟು ಇಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ. ಏಕೆ ಇಡಬೇಕು ಎಂಬೆಲ್ಲಾ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos