ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ

|

Updated on: Nov 01, 2024 | 1:11 PM

ಎಲ್ಲಾದರೂ ಮಂಗನ ಸದ್ದು ಕೇಳಿದರೆ ಸಾಕು ನಾಯಿ ಅಟ್ಟಾಡಿಸಿಕೊಂಡು ಹೋಗುವುದು ಸಾಮಾನ್ಯ. ಆದರೆ, ತೆಲಂಗಾಣದ ಭದ್ರಾದ್ರಿಯಲ್ಲಿ ವೈರತ್ವ ಮರೆತು ಸ್ನೇಹಿತರಾಗಿರುವ ನಾಯಿ- ಕೋತಿಯ ವಿಡಿಯೋ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋವನ್ನೊಮ್ಮೆ ನೋಡಿಬಿಡಿ.

ತೆಲಂಗಾಣ: ಮನುಷ್ಯರ ನಡುವೆ ದಿನದಿಂದ ದಿನಕ್ಕೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಆದರೆ ಬದ್ಧ ವೈರಿಗಳಾಗಿದ್ದ ಮೂಕ ಜೀವಿಗಳ ನಡುವೆ ದ್ವೇಷ ಕರಗಿ ಪ್ರೀತಿ ಮೂಡಿದೆ. ಕೋತಿಯ ಜೊತೆಗೆ ಸ್ನೇಹ ಬೆಳೆಸಿಕೊಂಡಿರುವ ನಾಯಿ ಆ ಕೋತಿಯನ್ನು ತನ್ನ ಬೆನ್ನ ಮೇಲೆ ಹೊತ್ತು ತಿರುಗುತ್ತಿರುವ ವಿಡಿಯೋ ವೈರಲ್ ಆಗಿದೆ. ಹಾಗೇ, ಆ ಕೋತಿ ಕೂಡ ನಾಯಿಯನ್ನು ರಸ್ತೆಯಲ್ಲಿ ಮಲಗಿಸಿಕೊಂಡು ಅದರ ಮೈಮೇಲಿಂದ ಹೇನುಗಳನ್ನು ಹುಡುಕುತ್ತಿದೆ. ಈ ದೃಶ್ಯ ಕಂಡುಬಂದಿದ್ದು ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಅಶ್ವರಾವ್ ಪೇಟೆಯಲ್ಲಿರುವ ಗೆಸ್ಟ್ ಹೌಸ್ ಮಾರುಕಟ್ಟೆಯಲ್ಲಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ