ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಅಮೆರಿಕದ ಶ್ವೇತಭವನದಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದುದಕ್ಕೆ ಭಾರತ ಮೂಲದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತೀವ್ರ ಟೀಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಮೆರಿಕದಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರವೊಂದನ್ನು ತಾವೇ ಆಯೋಜಿಸಿ ಅದರ ಮುಂದಾಳತ್ವ ವಹಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಅಮೆರಿಕನ್ನರು ಗುರುವಾರ ದೀಪಾವಳಿಯನ್ನು ಆಚರಿಸಿದರು. ಜೋ ಬೈಡೆನ್ ದೇಶದಾದ್ಯಂತದ ಸುಮಾರು 600 ಭಾರತೀಯ-ಅಮೆರಿಕನ್ನರನ್ನು ಆಹ್ವಾನಿಸುವ ಮೂಲಕ ಶ್ವೇತಭವನದಲ್ಲಿ ಅತಿದೊಡ್ಡ ದೀಪಾವಳಿಯನ್ನು ಆಯೋಜಿಸಿದ್ದರು. “ಇಂದು ರಾತ್ರಿ, ನಾವು ಅಮೆರಿಕದಾದ್ಯಂತ ಮತ್ತು ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರೊಂದಿಗೆ ದೀಪಗಳನ್ನು ಬೆಳಗಿಸಿದ್ದೇವೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕಾಗಿ ಹೋರಾಟವನ್ನು ಆಚರಿಸಿದ್ದೇವೆ. ಅಜ್ಞಾನದ ಮೇಲೆ ಜ್ಞಾನ ಮತ್ತು ಕತ್ತಲೆಯ ಮೇಲೆ ಬೆಳಕು ಚೆಲ್ಲಲಿ” ಎಂದು ಕಮಲಾ ಹ್ಯಾರಿಸ್ ತನ್ನ ಎಕ್ಸ್ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ