Video: ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ

Updated on: May 25, 2026 | 11:56 AM

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸಾರ್ವಜನಿಕರನ್ನು ಕಂಗಾಲು ಮಾಡುವಂತಹ ವಿಲಕ್ಷಣ ಮತ್ತು ನಂಬಲಾರದ ಘಟನೆಯೊಂದು ನಡೆದಿದೆ. ಇಲ್ಲಿನ ಬೀದಿನಾಯಿಯೊಂದು ಸಾರ್ವಜನಿಕರ ಕಣ್ಣೆದುರೇ ಬರೋಬ್ಬರಿ 1 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್‌ ಅನ್ನು ಹೊತ್ತೊಯ್ದಿದೆ. ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಮತ್ತು ಅವುಗಳ ಕಡಿತದಿಂದ ಮನುಷ್ಯರು ಹೇಗೋ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ನಾಯಿಗಳನ್ನು ಮುಂದಿಟ್ಟುಕೊಂಡು ಹಗಲು ದರೋಡೆ ಮಾಡುವ ಕೆಲವು ವಿಕೃತ ಮನಸ್ಸಿನ ಗ್ಯಾಂಗ್‌ಗಳು ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ.

ಬಿಜ್ನೋರ್, ಮೇ 25: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸಾರ್ವಜನಿಕರನ್ನು ಕಂಗಾಲು ಮಾಡುವಂತಹ ವಿಲಕ್ಷಣ ಮತ್ತು ನಂಬಲಾರದ ಘಟನೆಯೊಂದು ನಡೆದಿದೆ. ಇಲ್ಲಿನ ಬೀದಿನಾಯಿಯೊಂದು ಸಾರ್ವಜನಿಕರ ಕಣ್ಣೆದುರೇ ಬರೋಬ್ಬರಿ 1 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್‌ ಅನ್ನು ಹೊತ್ತೊಯ್ದಿದೆ.

ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಮತ್ತು ಅವುಗಳ ಕಡಿತದಿಂದ ಮನುಷ್ಯರು ಹೇಗೋ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ನಾಯಿಗಳನ್ನು ಮುಂದಿಟ್ಟುಕೊಂಡು ಹಗಲು ದರೋಡೆ ಮಾಡುವ ಕೆಲವು ವಿಕೃತ ಮನಸ್ಸಿನ ಗ್ಯಾಂಗ್‌ಗಳು ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಖದೀಮರು ಮನುಷ್ಯರಿಂದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದಿಯಲು ಬೀದಿನಾಯಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಹಣದ ಬ್ಯಾಗ್ ಕಳೆದುಕೊಂಡ ವ್ಯಕ್ತಿ ತಕ್ಷಣವೇ ನಾಯಿಯ ಹಿಂದೆ ಓಡಿದರಾದರೂ, ಚಾಣಾಕ್ಷ ನಾಯಿ ಹಣದೊಂದಿಗೆ ಮರೆಯಾಗಿದೆ. ಸದ್ಯ ಈ ವಿಚಿತ್ರ ಕಳ್ಳತನದ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಾಣಿಗಳನ್ನು ಈ ರೀತಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಕಿಡಿಗೇಡಿಗಳ ಪತ್ತೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us