ಕಲಬುರಗಿಯಲ್ಲಿ ಸಿದ್ದರಾಮಯ್ಯಗೆ ಬೃಹತ್ ಡೊಳ್ಳಿನ ಹಾರ ಹಾಕಿದ ಬೆಂಬಲಿಗ
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಅವರಿಗೆ ಬೃಹತ್ ಡೊಳ್ಳಿನ ಹಾರ ಹಾಕಿದ್ದಾರೆ.
ಕಲಬುರಗಿ: ಕಾಂಗ್ರೆಸ್ ನಾಯಕರು ಕ್ಷೇತ್ರವಾರು ಪ್ರಜಾಧ್ವನಿ ಹೆಸರಿನ ಬಸ್ ಯತ್ರೆ ಮಾಡುತ್ತಿದ್ದಾರೆ. ಇದರಂತೆ ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದ ಬಸ್ ಯಾತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿದ್ದು, ಇಂದು (ಫೆ.7) ಕಲಬುರಗಿ ಪ್ರವೇಶಿಸಿದೆ. ಜಿಲ್ಲೆಯ ಅಫಜಲಪುರ ಪಟ್ಟಣಕ್ಕೆ ಬಸ್ ಯಾತ್ರೆ ತಲುಪಿದೆ. ಪಟ್ಟಣದಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಗ ಜೆ.ಎಂ ಕೊರಬು ಎಂಬುವರು ಬೃಹತ್ ಡೊಳ್ಳಿನ ಹಾರ ಹಾಕಿದ್ದಾರೆ.