Loading video

ಬಸನಗೌಡ ಯತ್ನಾಳ್ ಕೈಗೆ ಯಾರು ಚೀಟಿ ಕೊಟ್ಟರೆಂದು ಗೊತ್ತಿಲ್ಲ, ನಾನಾಗ ಪರಿಷತ್​​ನಲ್ಲಿದ್ದೆ: ಚಲುವರಾಯಸ್ವಾಮಿ

|

Updated on: Mar 25, 2025 | 4:05 PM

ಹನಿ ಟ್ರ್ಯಾಪ್ ಸಂಗತಿ ರಾಜ್ಯಕ್ಕೆ ಹೊಸದೇನಲ್ಲ, ಇದಕ್ಕೂ ಮೊದಲು ಸಹ ನಡೆದಿದೆ, ಇದರಲ್ಲಿ ಸರ್ಕಾರಕ್ಕೆ ಮುಜುಗುರ ಉಂಟಾಗುವಂಥದ್ದೇನೂ ಇಲ್ಲ, ರಾಜಣ್ಣ ಅವರು ದೂರು ದಾಖಲಿಸಿದರೆ ಸರ್ಕಾರ ಉನ್ನತಮಟ್ಟದ ತನಿಖೆ ಮಾಡಿಸಲು ತಯಾರಿದೆ, ಅವರು ಇವತ್ತು ಗೃಹಮಂತ್ರಿಗಳಿಗೆ ದೂರು ಸಲ್ಲಿಸುವ ತಯಾರಿ ಮಾಡಿಕೊಂಡಿದ್ದರೆ ಸಂತೋಷ ಎಂದು ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರು, 25 ಮಾರ್ಚ್: ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ವಿರೋಧ ಪಕ್ಷಗಳ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಉತ್ತಮ ಬಜೆಟ್ ಮೇಲೆ ಮೇಲೆ ಚರ್ಚೆ ಮಾಡೋದು ಬಿಟ್ಟು ಬೇರೆ ವಿಷಯವನ್ನು ಸದನದಲ್ಲಿ ಚರ್ಚೆಗೆ ತಂದರು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೈಗೆ ಯಾರು ಚೀಟಿ ಕೊಟ್ಟರೆನ್ನುವುದು ತನಗೆ ಗೊತ್ತಿಲ್ಲ ಎಂದು ಹೇಳಿದರು. ಸಚಿವ ಕೆಎನ್ ರಾಜಣ್ಣ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದಿದ್ದಾರೆಯೇ ಹೊರತು ಹನಿ ಟ್ರ್ಯಾಪ್​ಗೊಳಗಾಗಿದ್ದೇನೆ ಎಂದಿಲ್ಲ, ಎಂದು ಚಲುವರಾಯಸ್ವಾಮಿ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Honey-Trap : ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕರ್ನಾಟಕದ ಹನಿಟ್ರ್ಯಾಪ್ ಪ್ರಕರಣ