ಕಾಂಗ್ರೆಸ್ ನಾಯಕರು ಸಂವಿಧಾನವನ್ನು ಬುದ್ಧಿವಂತರ ಜೊತೆ ಚರ್ಚಿಸಿ ಅರ್ಥವನ್ನು ತಿಳಿದುಕೊಳ್ಳಬೇಕು: ನಿಖಿಲ್ ಕುಮಾರಸ್ವಾಮಿ
ಶಿವಕುಮಾರ್ ಅವರು ಮಾತಾಡುವುದನ್ನು ಕೇಳಿಸಿಕೊಂಡರೆ ತಲೆ ಮತ್ತು ನಾಲಗೆ ನಡುವಿನ ನಟ್ಟು ಬೋಲ್ಟು ಲೂಸ್ ಅದಂತೆ ಕಾಣುತ್ತಿವೆ, ಅವರು ಸಂವಿಧಾನ ಬದಲಾವಣೆ ಮಾಡುತ್ತಾರೋ ಇಲ್ಲ ತಿದ್ದುಪಡಿ ತರುತ್ತಾರೋ ಗೊತ್ತಿಲ್ಲ, ನಟ್ಟು ಬೋಲ್ಟು ಟೈಟ್ ಮಾಡುವ ಸ್ಪ್ಯಾನರ್ ಕಾಂಗ್ರೆಸ್ ಪಕ್ಷದಲ್ಲಿರಬಹುದು, ಇಲ್ಲದಿದ್ದರೆ ರಾಜ್ಯದ ಜನ ತಮ್ಮ ಬಳಿಯಿರುವ ಸ್ಪ್ಯಾನರ್ ಉಪಯೋಗಿಸುತ್ತಾರೆ ಎಂದು ನಿಖಿಲ್ ಹೇಳಿದರು.
ಬೆಂಗಳೂರು, 25 ಮಾರ್ಚ್: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ರಾಹುಲ್ ಗಾಂಧಿ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಕೇವಲ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಓಡಾಡಿದರೆ ಸಾಲದು, ಡಾ ಬಿಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಂಶಗಳನ್ನು ಬುದ್ಧಿವಂತರಿಂದ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಗೇಲಿ ಮಾಡಿದರು. ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ಸಂವಿಧಾನವನ್ನು ಬದಲಾಯಿಸಲಿದ್ದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಲೋಕಸಭಾ ಚುನಾವಣೆ ಸಮಯದಲ್ಲಿ ಅಪಪ್ರಚಾರ ಮಾಡಿದ್ದರು, ಆದರೆ ಈಗ ಅವರೇ ಸಂವಿಧಾನದಲ್ಲಿ ಬದಲಾವಣೆ ತರುವ ಮಾತಾಡುತ್ತಿದ್ದಾರೆ ಎಂದು ನಿಖಿಲ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ