ಬಾಲ್ಯದಲ್ಲಿ ಪುನೀತ್ ಫ್ರಾಕ್ ಹಾಕಿಕೊಂಡು ಡಾನ್ಸ್ ಮಾಡಿದ ಘಟನೆ ನೆನಪಿಸಿಕೊಂಡ ಹಿರಿಯ ನಿರ್ದೇಶಕ
‘ವಸಂತ ಗೀತ’ ಸಿನಿಮಾದಲ್ಲಿ ರಾಜ್ಕುಮಾರ್ ಹೀರೋ ಆಗಿ ಕಾಣಿಸಿಕೊಂಡರೆ, ಪುನೀತ್ ರಾಜ್ಕುಮಾರ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ‘ನೀನಾಡೋ ಮಾತೆಲ್ಲ ಚಂದ..’ ಹಾಡಿನಲ್ಲಿ ಬರುವ ಒಂದು ವಿಚಾರದ ಬಗ್ಗೆ ನಿರ್ದೇಶಕ ದೊರೆ ಭಗವಾನ್ ಮಾತನಾಡಿದ್ದಾರೆ.
‘ವಸಂತ ಗೀತ’ ಸಿನಿಮಾದಲ್ಲಿ (Vasanta Geeta Movie) ರಾಜ್ಕುಮಾರ್ ಹೀರೋ ಆಗಿ ಕಾಣಿಸಿಕೊಂಡರೆ, ಪುನೀತ್ ರಾಜ್ಕುಮಾರ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ‘ನೀನಾಡೋ ಮಾತೆಲ್ಲ ಚಂದ..’ ಹಾಡಿನಲ್ಲಿ ಬರುವ ಒಂದು ವಿಚಾರದ ಬಗ್ಗೆ ನಿರ್ದೇಶಕ ದೊರೆ ಭಗವಾನ್ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ರಾಜ್ಕುಮಾರ್ (Rajkumar) ಹಾಗೂ ಪುನೀತ್ ಅವರನ್ನು ಪೊಲೀಸರು ಹುಡುಕುತ್ತಿರುತ್ತಾರೆ. ಇವರಿಂದ ತಪ್ಪಿಸಿಕೊಳ್ಳೋಕೆ ರಾಜ್ಕುಮಾರ್ ಗಡ್ಡಧಾರಿ ವೇಷ ಹಾಕುತ್ತಾರೆ. ಪುನೀತ್ಗೆ ಹುಡುಗಿಯ ವೇಷ ಹಾಕಿರಲಾಗಿರುತ್ತದೆ. ‘ಪುನೀತ್ (Puneeth Rajkumar) ಫ್ರಾಕ್ ಹಾಕಿಕೊಂಡು ಡಾನ್ಸ್ ಮಾಡುತ್ತಾನೆ. ಆ ಡ್ರೆಸ್ನಲ್ಲಿ ಪುನೀತ್ ನಿಜಕ್ಕೂ ಮುದ್ದಾಗಿ ಕಾಣುತ್ತಿದ್ದ’ ಎಂದಿದ್ದಾರೆ ಭಗವಾನ್. ಈ ಹಾಡಿನಲ್ಲಿ ಬರುವ ಲಿಪ್ ಸಿಂಕ್ ಒಂದರ ವಿಚಾರದ ಬಗ್ಗೆಯೂ ದೊರೆ ಭಗವಾನ್ ಮಾತನಾಡಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಖ್ಯಾತಿ ಹಿರಿಯ ನಿರ್ದೇಶಕ ಭಗವಾನ್ ಅವರಿಗೆ ಇದೆ. ರಾಜ್ಕುಮಾರ್ ಕುಟುಂಬದ ಜತೆ ಭಗವಾನ್ ತುಂಬಾನೇ ಆಪ್ತವಾಗಿದ್ದರು. ರಾಜ್ಕುಮಾರ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು.
ಇದನ್ನೂ ಓದಿ:James: ಪುನೀತ್ ಕುರಿತು ಪ್ರೀತಿಯ ಮಾತನ್ನಾಡಿದ ಕಿಚ್ಚ; ‘ಸಲಾಂ ಸೋಲ್ಜರ್’ ಹಾಡಿನ ರಿಲೀಸ್ ಫೋಟೋಗಳು ಇಲ್ಲಿವೆ
‘ಪುನೀತ್ ನನ್ನ ಮಗು ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದಿದ್ದರು ಬಿ. ಸರೋಜಾದೇವಿ