ಮ್ಯುಚುವಲ್ ಫಂಡ್ನ ಮ್ಯಾನೇಜರ್ಗಳನ್ನು ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಒಬ್ಬ ನುರಿತ ಅಡುಗೆಯವನಿಗೆ ಹೋಲಿಸುತ್ತಾರೆ
ಫಂಡ್ ಮ್ಯಾನೇಜರ್ಗಳನ್ನು ಡಾ ರಾವ್, ಚಾಟ್ ಅಂಗಡಿ ನಡೆಸುವವನಿಗೆ ಹೋಲಿಸುತ್ತಾರೆ. ಅವನಿಗೆ ತನ್ನ ಗ್ರಾಹಕರ ಅಭಿರುಚಿ ಗೊತ್ತಿರುತ್ತದೆ, ಆ ಅನುಭವದ ಆಧಾರದ ಮೇಲೆಯೇ ಅವರ ಇಷ್ಟವಾಗುವ ಹಾಗೆ ಮಸಾಲಾ ಪೂರಿ ರೆಡಿ ಮಾಡಿಕೊಡುತ್ತಾನೆ.
ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಈ ಸಂಚಿಕೆಯಲ್ಲಿ ಮ್ಯುಚುವಲ್ ಫಂಡ್ನಲ್ಲಿ ಕಡಿಮೆ ರಿಸ್ಕ್ ತೆಗೆದುಕೊಳ್ಳಲಿಚ್ಛಿಸುವ ಹೂಡಿಕೆದಾರರ ಹಣವನ್ನು ಇನ್ವೆಸ್ಟ್ ಮಾಡಲು ಫಂಡ್ ಮ್ಯಾನೇಜರ್ ಗಳು ಯಾವ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಾರೆ, ಕಂಪನಿಗಳನ್ನು ಹೇಗೆ ಆರಿಸಿಕೊಳ್ಳುತ್ತಾರೆ ಎನ್ನವುದನ್ನು ವಿವರಿಸಿದ್ದಾರೆ. ಡಾ ರಾವ್ ಅವರು ಕಳೆದ ಸಂಚಿಕೆಯಲ್ಲಿ ಹೇಳಿದ ಹಾಗೆ ಮ್ಯಾನೇಜರ್ ಗಳು ಕಂಪನಿಗಳ ಒಂದು ಪೋರ್ಟ್ ಫೋಲಿಯೋ ಮಾಡಿಕೊಳ್ಳುತ್ತಾರೆ. ತಮಗೆ ಉತ್ತಮ ಮತ್ತು ಲೋ ರಿಸ್ಕ್ ಅನಿಸುವ ಕಂಪನಿಗಳ ಒಂದು ಸಮೂಹ ರಚಿಸಿಕೊಂಡು, ಅವುಗಳನ್ನು ಬೇರೆ ಬೇರೆ ಸೆಕ್ಟರ್ ಗಳ ಆಧಾರದಲ್ಲಿ ವಿಂಗಡಣೆ ಮಾಡಿಕೊಳ್ಳುತ್ತಾರೆ.
ಫಂಡ್ ಮ್ಯಾನೇಜರ್ಗಳನ್ನು ಡಾ ರಾವ್, ಚಾಟ್ ಅಂಗಡಿ ನಡೆಸುವವನಿಗೆ ಹೋಲಿಸುತ್ತಾರೆ. ಅವನಿಗೆ ತನ್ನ ಗ್ರಾಹಕರ ಅಭಿರುಚಿ ಗೊತ್ತಿರುತ್ತದೆ, ಆ ಅನುಭವದ ಆಧಾರದ ಮೇಲೆಯೇ ಅವರ ಇಷ್ಟವಾಗುವ ಹಾಗೆ ಮಸಾಲಾ ಪೂರಿ ರೆಡಿ ಮಾಡಿಕೊಡುತ್ತಾನೆ ಎಂದು ಹೇಳುವ ಡಾ ರಾವ್, ಅವನಂತೆಯೇ ಫಂಡ್ ಮ್ಯಾನೇಜರ್ ಸಹ ತನ್ನಲ್ಲಿ ಬರುವ ಹೂಡಿಕೆದಾರರ ಹಿತಾಸಕ್ತಿಗಳಿಗೆ ತಕ್ಕಂತೆ ಅವರ ಹಣವನ್ನು ಹೂಡಿಕೆ ಮಾಡುತ್ತಾನೆ ಎನ್ನುತ್ತಾರೆ.
ಮಸಾಲಾ ಪೂರಿ ವ್ಯಾಪಾರಿಯ ನಂತರ ಒಬ್ಬ ಫಂಡ್ ಮ್ಯಾನೇಜರ್ನನ್ನು ಡಾ ರಾವ್ ಅವರು ಒಬ್ಬ ಕುಕ್ ಗೂ ಹೋಲಿಸುತ್ತಾರೆ. ಜನ ಇಷ್ಟಪಡುವ ಹಾಗೆ, ಅವರಿಗೆ ತೃಪ್ತಿಯಾಗುವ ಹಾಗೆ ಅಡುಗೆ ಮಾಡಿ ಬಡಿಸುವ ಕೆಲಸದಲ್ಲಿ ನಿಷ್ಣಾತನಾಗಿರುವ ಹಾಗೆಯೇ, ಫಂಡ್ ಮ್ಯಾನೇಜರ್ ಅಪಾಯರಹಿತ ಹೂಡಿಕೆಯಲ್ಲಿ ಪರಿಣಿತನಾಗಿರುತ್ತಾನೆ.
ಅವನೊಂದಿಗಿರುವ ಟೀಮು ಸಂಶೋಧನೆಗಳನ್ನು ಮಾಡಿ ಮ್ಯಾನೇಜರ್ ಗೆ ಕಂಪನಿಗಳ ವಿವರಗಳನ್ನು ನೀಡುತ್ತಾರೆ. ಕಂಪನಿಗಳ ಸಾಧಕ-ಬಾಧಕಗಳ ಪಟ್ಟಿ ತಯಾರು ಮಾಡಿ ಅವನ ಕೈಗೆ ನೀಡುತ್ತಾರೆ.
ಆಟೋಮೊಬೀಲ್ ಸೆಕ್ಟರ್ನಲ್ಲಿ ಹತ್ತು ಕಂಪನಿಗಳ ಲಿಸ್ಟ್ ಮ್ಯಾನೇಜರ್ ಕೈ ಸೇರಿದ್ದರೆ, ಹೂಡಿಕೆದಾರನ 100 ರೂ. ಗಳಲ್ಲಿ 10 ರೂ.ಗಳನ್ನು ಈ ಸೆಕ್ಟರ್ ನ ಬೇರೆ ಬೇರೆ ಕಂಪನಿಗಳಲ್ಲಿ ಹೂಡಲು ಮ್ಯಾನೇಜರ್ ನಿರ್ಧರಿಸುತ್ತಾನೆ.
ಹಾಗೆಯೇ, ಅವನು 10 ರೂ. ಗಳನ್ನು ಒಂದೇ ಅಟೋಮೊಬೀಲ್ ಕಂಪನಿಯಲ್ಲಿ ಇನ್ವೆಸ್ಟ್ ಮಾಡದೆ, ಹೆವಿ ಮೋಟರ್ಸ್ ತಯಾರಿಸುವ ಕಂಪನಿಯಲ್ಲಿ 2 ರೂ., ಬೈಕ್ ತಯಾರಿಸುವ ಕಂಪನಿಯಲ್ಲಿ 1 ರೂ., ಹೀಗೆ, ಎಲ್ಲಿ ರಿಟರ್ನ್ಸ್ ಸೇಫ್ ಮತ್ತು ಜಾಸ್ತಿ ಆನಿಸುತ್ತೋ ಅಂಥ ಕಂಪನಿಗಳಲ್ಲಿ ಹೂಡಿಕೆದಾರನ ಹಣ ತೊಡಗಿಸುತ್ತಾನೆ.
ಈ ಸೂತ್ರ ಉಳಿದ ಸೆಕ್ಟರ್ನ ಕಂಪನಿಗಳಿಗೂ ಅನ್ವಯವಾಗುತ್ತದೆ.
ಇದನ್ನೂ ಓದಿ: Prabhas: ‘ಸಲಾರ್’ ವಿಡಿಯೋ ಲೀಕ್: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್ ಅಭಿಮಾನಿಗಳಿಗೆ ಪದೇಪದೇ ನಿರಾಸೆ