ನಾನು ಬೆಳೆದಿದ್ದು ದೇವನಹಳ್ಳಿಯಲ್ಲಿ, ಸ್ಥಳೀಯನಲ್ಲ ಅಂತ ಡಾ ಸುಧಾಕರ್ ಹೇಗೆ ಹೇಳುತ್ತಾರೆ? ರಕ್ಷಾರಾಮಯ್ಯ
ಅದ್ಯಾವ ಹಿನ್ನೆಲೆಯಲ್ಲಿ ಅವರು ತಾನು ಹೊರಗಿನವರ ಅಂತ ಹೇಳುತ್ತಾರೋ ಗೊತ್ತಿಲ್ಲ, ತಾನು ಬೆಳೆದಿದ್ದೆಲ್ಲ ದೇವನಹಳ್ಳಿ ತಾಲ್ಲೂಕಿನಲ್ಲಿ, ತಮ್ಮ ಮನೆಗಳು ಅಲ್ಲಿವೆ ಎಂದ ರಕ್ಷಾರಾಮಯ್ಯ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದಾಗ ಅವರಿಗಾಗಿ ಕೆಲಸ ಮಾಡಿರುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ: ಇವತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿಯಾಗಿ (Congress candidate) ನಾಮಪತ್ರ ಸಲ್ಲಿಸಿ ರಕ್ಷಾರಾಮಯ್ಯ (Raksha Ramaiah) ಚುನಾವಣಾ ರಾಜಕೀಯಕ್ಕೆ ಹೊಸಬರಾದರೂ ಅಳೆದು ತೂಗಿ ಅರ್ಥಗರ್ಭಿತವಾಗಿ ಮಾತಾಡುತ್ತಾರೆ. ಟಿವಿ9 ಚಿಕ್ಕಬಳ್ಳಾಪುರದ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ನಾಮಪತ್ರ ಸಲ್ಲಿಸುವಾಗ ತನ್ನೊಂದಿಗಿದ್ದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ಅವರ ಎದುರಾಳಿ ಬಿಜೆಪಿಯ ಡಾ ಕೆ ಸುಧಾಕರ್ (Dr K Sudhakar), ರಕ್ಷಾರಾಮಯ್ಯ ಸ್ಥಳೀಯರಲ್ಲ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದ್ಯಾವ ಹಿನ್ನೆಲೆಯಲ್ಲಿ ಅವರು ತಾನು ಹೊರಗಿನವರ ಅಂತ ಹೇಳುತ್ತಾರೋ ಗೊತ್ತಿಲ್ಲ, ತಾನು ಬೆಳೆದಿದ್ದೆಲ್ಲ ದೇವನಹಳ್ಳಿ ತಾಲ್ಲೂಕಿನಲ್ಲಿ, ತಮ್ಮ ಮನೆಗಳು ಅಲ್ಲಿವೆ ಎಂದು ಹೇಳಿದರು. ವೀರಪ್ಪ ಮೊಯ್ಲಿ ಅವರ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದಾಗ ಅವರಿಗಾಗಿ ಕೆಲಸ ಮಾಡಿರುವುದಾಗಿ ಹೇಳಿದ ರಕ್ಷಾರಾಮಯ್ಯ, ಇಲ್ಲಿನ ಜನತೆಯೊಂದಿಗೆ ಒಟನಾಟವಿದೆ, ನಂಟಿದೆ, ಏನಾದರೂ ಕಾಮೆಂಟ್ ಮಾಡಬೇಕೆನ್ನುವ ಕಾರಣಕ್ಕೆ ಸುಧಾಕರ್ ಹಾಗೆ ಹೇಳಿದ್ದಾರೆ ಎಂದರು. ಶೇಕಡ 60ರಷ್ಟಿರುವ ಯುವಕರೇ ಭಾರತದ ಭವಿಷ್ಯವಾಗಿದ್ದಾರೆ ಎನ್ನುವ ಅವರು ಯುವಕರಿಗೆ ಸೂಕ್ತ ಆದ್ಯತೆ ಮತ್ತು ಪ್ರಾಶಸ್ತ್ಯ ನೀಡಬೇಕು ಎಂದು ಅಭಿಪ್ರಾಯಪಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾ ಕೆ ಸುಧಾಕರ್ ವಿರುದ್ಧ ಹೆಚ್ಚಿದ ವಿರೋಧ, ನೆಲಮಂಗಲ ಮತ್ತು ಯಲಹಂಕದಲ್ಲಿ ಗೋ ಬ್ಯಾಕ್ ಸುಧಾಕರ್ ಅಭಿಯಾನ