AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ, ಬೆಳ್ಳಿ, ವಜ್ರ.. ಅಬ್ಬಬ್ಬಾ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ನವರು ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಡಾ.ಕೆ ಸುಧಾಕರ್ ಅವರಿಗಿಂತ ಅವರ ಪತ್ನಿ ಡಾ.ಪ್ರೀತಿ 2ಪಟ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ. ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ಅದರ ವಿವರ ಇಲ್ಲಿದೆ.

ಚಿನ್ನ, ಬೆಳ್ಳಿ, ವಜ್ರ.. ಅಬ್ಬಬ್ಬಾ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ?
ರಕ್ಷಾರಾಮಯ್ಯ, ಡಾ.ಕೆ ಸುಧಾಕರ್
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Apr 02, 2024 | 9:46 AM

Share

ಚಿಕ್ಕಬಳ್ಳಾಪುರ, ಏಪ್ರಿಲ್.02: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ (Lok Sabha Election) ಅಖಾಡ ರಂಗೇರಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಕೆ ಸುಧಾಕರ್ (Dr K Sudhakar) ಕಣದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಾರಾಮಯ್ಯ (Raksha Ramaiah) ಜಿದ್ದಿಗೆ ನಿಂತಿದ್ದಾರೆ. ಸದ್ಯ ನಿನ್ನೆ ಇಬ್ಬರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದ ಜೊತೆಗೆ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಆಸ್ತಿ ವಿವರ ಹೀಗಿದೆ

ಸುಧಾಕರ್ ಬಳಿ ಇರುವ ನಗದು-10,680 ರೂಪಾಯಿ. ಪತ್ನಿ ಡಾ‌. ಪ್ರೀತಿ ಸುಧಾಕರ್ ಬಳಿ ಇರುವ ನಗದು 5,10,000 ರೂಪಾಯಿ. ಸುಧಾಕರ್ ಬಳಿ‌ ಇರುವ ಚರಾಸ್ತಿ -2,69,07,354 ರೂಪಾಯಿ. ಪತ್ನಿ ಡಾ. ಪ್ರೀತಿ ಸುಧಾಕರ್ ಚರಾಸ್ತಿ-5,52,10,023 ರೂಪಾಯಿ. ಅವಿಭಕ್ತ ಕುಟುಂಬದ ಚರಾಸ್ತಿ -1,53,50,677 ರೂಪಾಯಿ. ಸುಧಾಕರ್ ಇಬ್ಬರ ಮಕ್ಕಳ ಹೆಸರಲ್ಲಿ ತಲಾ 6,77,266 ರೂಪಾಯಿ ಚರಾಸ್ತಿ ಇದೆ.

ಸ್ತಿರಾಸ್ತಿಗಳ ವಿವರ:

ಡಾ.ಸುಧಾಕರ್ ಹಾಗೂ ಪತ್ನಿ ಡಾ.ಪ್ರೀತಿ ಸುಧಾಕರ್ ಹೆಸರಿನಲ್ಲಿ‌ ಪ್ರಸ್ತುತ 3,64,00,000 ಮೌಲ್ಯದ ಕೃಷಿಭೂಮಿ ಇದೆ. 3,82,20,000 ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಪೇರೇಸಂದ್ರ ಸ್ವಗ್ರಾಮದಲ್ಲಿ 1,15,79,480 ರುಪಾಯಿ ಮೌಲ್ಯದ ಮನೆ ಇದೆ. ಸದಾಶಿವನಗರದಲ್ಲಿ 14,92,41,090 ರೂಪಾಯಿ ಮೌಲ್ಯದ ನಿವಾಸವಿದೆ.

ಸಾಲದ ವಿವರ

ಸುಧಾಕರ್ ಸಾಲ ಬಾಕಿ ಪಾವತಿ- 1,30,56,130. ಪತ್ನಿ ಪ್ರೀತಿ ಸುಧಾಕರ್ ಸಾಲ- 19,03,92,819 ರೂಪಾಯಿ.

ಚಿನ್ನಾಭರಣಗಳ‌ ವಿವರ

ಸುಧಾಕರ್ ಬಳಿ 06 ಲಕ್ಷ ಮೌಲ್ಯದ 160 ಗ್ರಾಂ ಬಂಗಾರದ ಸರ ಬ್ರಾಸ್ಲೆಟ್ ಇದೆ. 3,53,320 ರೂಪಾಯಿಯ ಬೆಳ್ಳಿ ಆಭರಣಗಳಿವೆ. ಪತ್ನಿ ಬಳಿ 56 ಲಕ್ಷ ಮೌಲ್ಯದ 1 ಕೆಜಿ ಚಿನ್ನ ಹಾಗೂ 4 ಜೊತೆ ವಜ್ರ ಇದೆ. 12 ಲಕ್ಷ ಮೌಲ್ಯದ 21 ಕೆಜಿ ಬೆಳ್ಳಿ ಇದೆ.

ಇದನ್ನೂ ಓದಿ: ಹುಟ್ಟು ಕೋಟ್ಯಧೀಶರಾಗಿದ್ದ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್​ ಚಂದ್ರು ಬಳಿ ಈಗ ಆಸ್ತಿ ಎಷ್ಟಿದೆ ಗೊತ್ತಾ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಆಸ್ತಿ ವಿವರ ಹೀಗಿದೆ

ರಕ್ಷಾರಾಮಯ್ಯ ಬಳಿ ಇರುವ ನಗದು-1,21,218 ರೂಪಾಯಿ. ರಕ್ಷರಾಮಯ್ಯ ಚರಾಸ್ತಿಯ ಮೌಲ್ಯ-54,98,65,359 ರೂಪಾಯಿ. ಪತ್ನಿ ಅಶಿತಾ ರಕ್ಷಾರಾಮಯ್ಯ ಚರಾಸ್ತಿಯ ವಿವರ-7,23,09,439 ರೂಪಾಯಿ. ತಂದೆ ಸೀತಾರಾಂ ಚರಾಸ್ತಿಯ ವಿವರ-17,00,43,753 ರೂಪಾಯಿ.

ಸ್ಥಿರಾಸ್ತಿಯ ವಿವರ

ರಕ್ಷಾರಾಮಯ್ಯ ಹೆಸರಲ್ಲಿ 27,85,20,686 ಮೌಲ್ಯದ ಸ್ಥಿರಾಸ್ತಿ. ಪತ್ನಿ ಅಶಿತಾ ಹೆಸರಲ್ಲಿ 9,79,12,270 ಮೌಲ್ಯದ ಸ್ಥಿರಾಸ್ತಿ. ತಂದೆ ಸೀತಾರಾಂ ಹೆಸರಲ್ಲಿ 17,52,51,093 ಮೌಲ್ಯದ ಆಸ್ತಿ.

ಸಾಲದ ವಿವರ

ರಕ್ಷರಾಮಯ್ಯ- 20,93,44,880 ರೂಪಾಯಿ ಸಾಲ. ಅಶಿತಾ ರಕ್ಷರಾಮಯ್ಯ – 10,55,14,256 ರೂಪಾಯಿ. ತಂದೆ ಸೀತಾರಾಂ- 11,02,19,742 ರೂಪಾಯಿ.

ಬ್ಯಾಂಕ್ ಗಳಲ್ಲಿರುವ ನಗದು

ರಕ್ಷರಾಮಯ್ಯ- 76,73,154 ರೂಪಾಯಿ. ಅಶಿತಾ ರಕ್ಷರಾಮಯ್ಯ-86,47,963 ರೂಪಾಯಿ. ಸೀತಾರಾಂ-1,26,43,848 ರೂಪಾಯಿ.

ಮ್ಯೂಚುಯಲ್ ಬಾಂಡ್ಸ್ ಹಾಗೂ ಶೇರ್ ಗಳ ವಿವರ

ರಕ್ಷರಾಮಯ್ಯ-40,19,54,734. ಅಶಿತಾ ರಕ್ಷರಾಮಯ್ಯ- 70,28,008. ಸೀತಾರಾಂ- 3,06,58,429.

ವಿವಿಧ ವಿಮೆಗಳ ವಿವರ

ರಕ್ಷರಾಮಯ್ಯ-1,38,43,839. ಅಶಿತಾ ರಕ್ಷರಾಮಯ್ಯ-50,50,883.

ವಿವಿಧ ಕಂಪನಿ ವ್ಯಕ್ತಿಗಳಿಗೆ ಸಾಲ ನೀಡಿದ ವಿವರ

ರಕ್ಷರಾಮಯ್ಯ- 9,26,00,077. ಅಶಿತಾ ರಕ್ಷರಾಮಯ್ಯ-90,00,000. ಸೀತಾರಾಂ- 89,60,43,894 ರೂಪಾಯಿ.

ಕಾರುಗಳ ವಿವರ

ರಕ್ಷಾರಾಮಯ್ಯ ಬಳಿ 2,70,72,714 ರೂಪಾಯಿ ಮೌಲ್ಯದ 4 ಕಾರುಗಳಿವೆ. ಅಶಿತಾ ರಕ್ಷರಾಮಯ್ಯ ಬಳಿ‌ 1,11,70,855 ಮೌಲ್ಯದ ಕಾರಿದೆ

ಚಿನ್ನಾಭರಣಗಳ‌ ವಿವರ

ರಕ್ಷಾರಾಮಯ್ಯ ಬಳಿ 55,34,742 ಮೌಲ್ಯದ 853 ಗ್ರಾಂ ಚಿನ್ನಾಭರಣ, 3,65,345 ರೂಪಾಯಿ ಮೌಲ್ಯದ 5169 ಗ್ರಾಂ ಬೆಳ್ಳಿ ಅಭರಣಗಳು. 5 ಲಕ್ಷ ಮೌಲ್ಯದ ವಿವಿಧ ವಾಚ್ ಗಳು.

ಅಶಿತಾ ರಕ್ಷರಾಮಯ್ಯ ಬಳಿ 2.94,10,100 ರೂಪಾಯಿಯ 5 ಕೆಜಿ 261 ಗ್ರಾಂ ಚಿನ್ನಾಭರಣ, 17,11,728 ಗ್ರಾಂ ಬೆಳ್ಳಿ ಆಭರಣಗಳಿವೆ.

ಸೀತಾರಾಂ ಬಳಿ 7,98,60,622 ಮೌಲ್ಯದ 11 ಕೆ.ಜಿ 442 ಗ್ರಾಂ ಚಿನ್ನಾಭರಣಗಳು, 4,05,138 ಮೌಲ್ಯದ 5 ಕೆಜಿ 732 ಗ್ರಾಂ ಬೆಳ್ಳಿ ಅಭರಣಗಳಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ