ತನ್ನಿಂದ ಇನ್ನೊಬ್ಬರು ಅವಕಾಶವಂಚಿತರಾಗುವುದು ಬೇಡ, ತನ್ನ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಿಕೊಳ್ಳಿ ಎಂದಿದ್ದರು ರಜೆ ಮೇಲಿದ್ದ ಸೌಂದರ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2022 | 6:15 PM

ಕುಟುಂಬದ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಡಾ ಸೌಂದರ್ಯ ಅವರು ಹಸನ್ಮುಖಿಯಾಗಿರುತ್ತಿದ್ದರು ಮತ್ತು ಎಲ್ಲರೊಂದಿಗೆ ಸ್ನೇಹಭಾವದೊಂದಿಗೆ ವರ್ತಿಸುತ್ತಿದ್ದರು. ತಮ್ಮ ರಜೆಯನ್ನು ಮುಂದುವರಿಸುವಂತೆ ಕಾಲೇಜಿನ ಆಡಳಿತ ವರ್ಗಕ್ಕೆ ಅವರು ಅರ್ಜಿ ಸಲ್ಲಿಸಿದ್ದರು ಮತ್ತು ತಮ್ಮ ಸ್ಥಾನಕ್ಕೆ ಬೇರೆ ಯಾರಾನ್ನಾದರೂ ನೇಮಕ ಮಾಡಿಕೊಳ್ಳುವಂತೆ ತಿಳಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೊಮ್ಮಗಳು ಡಾ ಸೌಂದರ್ಯ (Dr Soundarya) ಅವರ ಅಕಾಲಿಕ ಸಾವು ಕುಟುಂಬವನ್ನು ಸುಲಭಕ್ಕೆ ಚೇತರಿಸಿಕೊಳ್ಳದ ಆಘಾತಕ್ಕೆ ದೂಡಿದೆ. 30 ವರ್ಷ ವಯಸ್ಸಿನವರಾಗಿದ್ದ ಸೌಂದರ್ಯ ಅವರು ಶುಕ್ರವಾರ ಆತ್ಮಹತ್ಯೆ ಮೂಲಕ ನಿಧನ ಹೊಂದಿದರು. ಅವರ ದೇಹ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು (Mount Carmel College) ಹತ್ತಿರದ ಅಪಾರ್ಟ್ಮೆಂಟಿನ ಫ್ಲ್ಯಾಟೊಂದರಲ್ಲಿ ನೇತಾಡುತ್ತಿದ್ದಿದ್ದು ಶುಕ್ರವಾರ ಬೆಳಗ್ಗೆ ಪತ್ತೆಯಾಗಿತ್ತು. ಎಮ್ ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ (MS Ramaiah Medical College) ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಅವರು ಕಳೆದೊಂದು ವರ್ಷದಿಂದ ಹೆರಿಗೆ ರಜೆ ಮೇಲಿದ್ದರು. ಅವರಿಗೆ 6 ತಿಂಗಳು ಮಗುವಿದ್ದು ಅವರ ಪತಿ ಡಾ ನೀರಜ್ ಸಹ ಇದೇ ಆಸ್ಪತ್ರೆಯಲ್ಲಿ ರೇಡಿಯಾಜಿಸ್ಟ್ (Radiologist) ಆಗಿ ಕೆಲಸ ಮಾಡುತ್ತಾರೆ. ಕೇವಲ ಮೂರು ವರ್ಷಗಳ ಹಿಂದೆ ಅವರ ಮದುವೆಯಾಗಿತ್ತು.

ಬಿ ಎಸ್ ವೈ ಕುಟಂಬದೊಂದಿಗೆ ಬಹಳ ಹತ್ತಿರದ ಸಂಬಂಧ ಹೊಂದಿರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಡಾ ಸೌಂದರ್ಯ ಹೆರಿಗೆ-ನಂತರದ ಖಿನ್ನತೆಯಿಂದ ಬಳಲುತ್ತಿದ್ದರು ಅದೇ ಕಾರಂಣಕ್ಕೆ ಜೀವ ಕೊನೆಗಾಣಿಸುವ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ, ಸಾವಿಗೆ ಸಂಬಂಧಿಸಿದಂತೆ ಯಾರ ಮೇಲೂ ಅನುಮಾನವಿಲ್ಲ ಎಂದು ಶುಕ್ರವಾರ ಹೇಳಿದ್ದರು.

ಕುಟುಂಬದ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಡಾ ಸೌಂದರ್ಯ ಅವರು ಹಸನ್ಮುಖಿಯಾಗಿರುತ್ತಿದ್ದರು ಮತ್ತು ಎಲ್ಲರೊಂದಿಗೆ ಸ್ನೇಹಭಾವದೊಂದಿಗೆ ವರ್ತಿಸುತ್ತಿದ್ದರು. ತಮ್ಮ ರಜೆಯನ್ನು ಮುಂದುವರಿಸುವಂತೆ ಕಾಲೇಜಿನ ಆಡಳಿತ ವರ್ಗಕ್ಕೆ ಅವರು ಅರ್ಜಿ ಸಲ್ಲಿಸಿದ್ದರು ಮತ್ತು ತಮ್ಮ ಸ್ಥಾನಕ್ಕೆ ಬೇರೆ ಯಾರಾನ್ನಾದರೂ ನೇಮಕ ಮಾಡಿಕೊಳ್ಳುವಂತೆ ತಿಳಿಸಿದ್ದರು. ತಮ್ಮಿಂದಾಗಿ ಇನ್ನೊಬ್ಬರು ಅವಕಾಶವಂಚಿತರಾಗುವುದು ಅವರಿಗೆ ಇಷ್ಟವಿರಲಿಲ್ಲ.

ಡಾ ಸೌಂದರ್ಯ ಅವರೊಂದಿಗೆ ಮಾತಾಡುವಾಗ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅಂತ ಭಾಸವಾಗುತ್ತಿರಲಿಲ್ಲ ಅಂತ ಬಿ ಎಸ್ ವೈ ಕುಟುಂಬದ ಆಪ್ತರು ಹೇಳುತ್ತಿದ್ದಾರೆ.

ಇದನ್ನೂ ಓದಿ:   ಯಡಿಯೂರಪ್ಪ ಮೊಮ್ಮಗಳು ಡಾ ಸೌಂದರ್ಯ ಹೆರಿಗೆ ನಂತರದ ಖಿನ್ನತೆಯಿಂದ ಬಳಲುತ್ತಿದ್ದರು: ಗೃಹ ಸಚಿವ ಅರಗ ಜ್ಞಾನೇಂದ್ರ