ಶಿರಾದಲ್ಲಿ ರವಿವಾರ ರಾತ್ರಿ ಭಾರೀ ಮಳೆಯಿಂದ ಮನೆ-ಮಳಿಗೆಗಳು ಜಲಾವೃತ, ಸ್ಥಳೀಯರ ಆಕ್ರೋಶ

Updated on: May 20, 2024 | 11:06 AM

ಚರಂಡಿಯ ಕೊಳಚೆ ಜೊತೆ ಮಳೆ ನೀರು ಸೇರಿ ಮನೆಯೊಳಗೆ ಹರಿದು ಬಂದಾಗ ಮನೆಯವರ ಪಾಡೇನಾಗಬಹುದು ಅಂತ ಯೋಚಿಸಿ. ಕೊಳಚೆ ನೀರಿನ ಜೊತೆ ಹುಳ ಹುಪ್ಪಡಿ, ವಿಷಜಂತುಗಳು ಸಹ ಮನೆಯೊಳಗೆ ಹರಿದು ಬಂದಾಗ ಮಕ್ಕಳು ಮತ್ತು ಮಹಿಳೆಯರು ಆತಂಕಕ್ಕೊಳಗಾಗೋದು ಸಹಜ.

ತುಮಕೂರು: ಜಿಲ್ಲೆಯ ಹಲವಾರು ಭಾಗಗಲ್ಲಿ ಕಳೆದ ರಾತ್ರಿ ಸುರಿದ  ಮಳೆ  (heavy rains) ಅವಾಂತರ ಸೃಷ್ಟಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇದು ಶಿರಾ ಪಟ್ಟಣದಿಂದ (Sira town) ಲಭ್ಯವಾಗಿರುವ ವಿಡಿಯೋ. ರಸ್ತೆಗಳಲ್ಲಿ ನೀರು ನದಿಗಳಲ್ಲಿ ಹರಿಯುವ ಹಾಗೆ ಹರಿಯುತ್ತಿದೆ. ಮಳಿಗೆ ಮತ್ತು ಮನೆಗಳಲ್ಲಿ ಮಳೆ ನೀರು ನುಗ್ಗಿದೆ. ಮಳೆ ಬಂದಾಗ ಕೇವಲ ಬೆಂಗಳೂರಲ್ಲಿ (Bengaluru) ಮಾತ್ರ ಇಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಅಂತ ಅಲ್ಲಿನ ನಿವಾಸಿಗಳು ಭಾವಿಸಿದ್ದರೆ ಅದು ತಪ್ಪು. ಶಿರಾ ನಗರಸಭೆಯ ಅಧಿಕಾರಿಗಳು ಮತ್ತು ಅದರ ಸದಸ್ಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಷ್ಟೇ (BBMP) ಘನಂದಾರಿ ಕೆಲಸಗಳನ್ನು ಮಾಡಿದ್ದಾರೆ. ಸೂಕ್ತವಾದ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚರಂಡಿಯ ಕೊಳಚೆ ಜೊತೆ ಮಳೆ ನೀರು ಸೇರಿ ಮನೆಯೊಳಗೆ ಹರಿದು ಬಂದಾಗ ಮನೆಯವರ ಪಾಡೇನಾಗಬಹುದು ಅಂತ ಯೋಚಿಸಿ. ಕೊಳಚೆ ನೀರಿನ ಜೊತೆ ಹುಳ ಹುಪ್ಪಡಿ, ವಿಷಜಂತುಗಳು ಸಹ ಮನೆಯೊಳಗೆ ಹರಿದು ಬಂದಾಗ ಮಕ್ಕಳು ಮತ್ತು ಮಹಿಳೆಯರು ಆತಂಕಕ್ಕೊಳಗಾಗೋದು ಸಹಜ. ಶಿರಾದ ಶಾಸಕ ಮಳೆಗಾಲ ಶುರುವಾಗುವ ಮೊದಲು ಕಾರ್ಯೋನ್ಮುಖರಾಗದಿದ್ದರೆ ಜನ ಶಪಿಸಲಾರಂಭಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮಳೆಗಾಗಿ ಪೂಜೆ ಸಲ್ಲಿಸಿದ 48 ದಿನದಲ್ಲಿ ಮಳೆ ಆಗಮನ; ಕೋರಿಕೆ ಈಡೇರಿಸಿದಕ್ಕೆ ಸಮುದ್ರ ದೇವನಿಗೆ ಬಾಗಿನ ಅರ್ಪಣೆ