ಮಳೆಗಾಗಿ ಪೂಜೆ ಸಲ್ಲಿಸಿದ 48 ದಿನದಲ್ಲಿ ಮಳೆ ಆಗಮನ; ಕೋರಿಕೆ ಈಡೇರಿಸಿದಕ್ಕೆ ಸಮುದ್ರ ದೇವನಿಗೆ ಬಾಗಿನ ಅರ್ಪಣೆ
ರಾಜ್ಯದಲ್ಲಿ ಮಳೆ ಎಂಟ್ರಿ ಕೊಟ್ಟಿದ್ದು, ಜನರಲ್ಲಿನ ಆತಂಕ ದೂರ ಆಗಿದೆ. ಪ್ರಮುಖವಾಗಿ ಬೆಂಗಳೂರು ನಗರವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ತಲೆ ನೋವು ತಂದಿತ್ತು. ಆದ್ರೆ, ಈಗ ಮಳೆಯ ಸಿಂಚನ ಆರಂಭ ಆದ ಹಿನ್ನೆಲೆ ಬೆಂಗಳೂರು ನಗರವಾಸಿಗಳು ಕೊಂಚ ರಿಲೀಫ್ ಆಗಿದ್ದು, ಸಮುದ್ರಕ್ಕೆ ವಿಶೇಷ ಬಾಗಿನ ಅರ್ಪಣೆ ಮಾಡುವುದರ ಮೂಲಕ ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ, ಮೇ.17: ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಭೀಕರ ಬರಗಾಲ ಸೃಷ್ಟಿ ಆಗಿದೆ. ಬರಗಾಲದ ಬಿಸಿ ರಾಜಧಾನಿ ಬೆಂಗಳೂರು(Bengaluru) ನಗರವಾಸಿಗಳಿಗೂ ತಟ್ಟಿದೆ. ನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ತರಿಸುವ ಪರಿಸ್ಥಿತಿ ಬೆಂಗಳೂರು ನಗರವಾಸಿಗಳಿಗೆ ಬಂದೊದಗಿದೆ. ಇನ್ನು ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಹೇಳತೀರದಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊತ್ತು ಬಿತ್ತಿದ ಬೆಳೆ, ಕಣ್ಮುಂದೆಯೇ ಒಣಗಿ ಹೋಗುತ್ತಿದ್ದರೆ, ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೇ ಕ್ರಮಿಸಿ ನೀರು ತರಬೇಕಾಗಿತ್ತು. ಇದರಿಂದ ವಿಚಲಿತಗೊಂಡಿದ್ದ ಅನೇಕ ಜನ ಮಳೆಗಾಗಿ ದೇವರ ಮೊರೆ ಹೋಗಿದ್ದರು.
ಮಳೆಗಾಗಿ ವಿಶೇಷ ಪೂಜೆ ಮಾಡಿದ್ದ ಬೆಂಗಳೂರು ನಗರವಾಸಿಗಳು
ಹಾಗೆಯೇ ಬೆಂಗಳೂರು ನಗರದ ಜೋಡಿಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ಮತ್ತು ಅರ್ಚಕರ ತಂಡ, ಕಳೆದ ಮಾರ್ಚ್ 27 ರಂದು ಸಮುದ್ರದಲ್ಲಿ ವಿಶೇಷ ಹೋಮ ಹಾಕಿದ್ದರು. ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಕಾಳಿ ನದಿ ಸಮುದ್ರಕ್ಕೆ ಸಂಗಮ ಆಗುವ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಮುದ್ರದ ಮಧ್ಯದಲ್ಲಿ ದೋಣಿ ಮೂಲಕ ತೆರಳಿ ಹೋಮ ಹಾಕಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಪೂಜೆಯ ಫಲವಾಗಿ ಮುಂದಿನ 48 ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಆರಂಭ ಆಗುತ್ತೆ ಎಂದು ಭವಿಷ್ಯ ಕೂಡ ಹೇಳಿದ್ದರು.
ಇದನ್ನೂ ಓದಿ:ಉತ್ತರ ಕನ್ನಡ: ಮಳೆಗಾಗಿ ಬೆಂಗಳೂರು ನಗರವಾಸಿಗಳಿಂದ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ
ಕೋರಿಕೆ ಈಡೇರಿಸಿದಕ್ಕೆ ಸಮುದ್ರ ದೇವನಿಗೆ ಬಾಗಿನ ಅರ್ಪಣೆ
ಸದ್ಯ ಅರ್ಚಕರ ತಂಡ ಮಾಡಿದ ಪೂಜೆಗೆ ವರುಣ ದೇವ ಕೃಪೆ ಮಾಡಿದ್ದು, ರಾಜ್ಯದಲ್ಲಿ ಮಳೆ ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಆಗಿ ರಾಜ್ಯ ಬರಮುಕ್ತ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿರುವ ಹಿನ್ನೆಲೆ, ಮಳೆಗಾಗಿ ಪೂಜೆ ಸಲ್ಲಿಸಿದ ಸ್ಥಳದಲ್ಲೇ ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ, ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಣೆ ಮಾಡಲಾಯಿತು. ನಾವು ವರುಣ ದೇವನಿಗೆ ಮಾಡಿದ ಕೋರಿಕೆ ಫಲಪ್ರಧ ಆಗಿದೆ. ರಾಜ್ಯದ ಕೊಟ್ಯಾಂತರ ಜೀವಿಗಳಿಗೆ ಕುಡಿಯಲು ನೀರು ಸಿಕ್ಕಿದ್ದು, ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಬರದ ಬರೆಗೆ ಕಂಗೆಟ್ಟಿದ ಜನರಿಗೆ ವರುಣ ದೇವ ಕೃಪೆ ಮಾಡುತ್ತಿದ್ದು, ಇನ್ನಷ್ಟು ಮಳೆ ಆಗಿ ರಾಜ್ಯದ ನೀರಿನ ಆಕರಗಳು ಭರ್ತಿ ಆಗಿದ್ರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಕುಡಿಯುವ ನೀರಿನ ಸಮಸ್ಯೆ ದೂರ ಆಗುವುದು ಅಷ್ಟೆ ಅಲ್ಲ. ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಅನ್ನದಾತನಿಗೆ ಶಕ್ತಿ ಬಂದಂತಾಗುತ್ತದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ