ರವಿಚಂದ್ರನ್ ತಾಯಿ ಬಗ್ಗೆ ಡಾಕ್ಟರ್ ಹೇಳಿದ್ದೇ ಸುಳ್ಳಾಯ್ತು; ಅಮ್ಮನನ್ನು ಬದುಕಿಸಿದ ಆ ಶಕ್ತಿ ಯಾವುದು?
ಕಳೆದ ಹತ್ತು ವರ್ಷದಿಂದಲೂ ರವಿಚಂದ್ರನ್ ಅವರ ತಾಯಿಗೆ ಅನಾರೋಗ್ಯ ಕಾಡುತ್ತಿದೆ. ಕುಟುಂಬದ ಸದಸ್ಯರೆಲ್ಲರೂ ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರಿಗೆ ತಂದೆ-ತಾಯಿ ಬಗ್ಗೆ ಅಪಾರ ಪ್ರೀತಿ. ಅವರ ತಾಯಿ ಪಟ್ಟಮ್ಮಾಳ್ ಅವರಿಗೆ ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹತ್ತು ವರ್ಷಗಳ ಹಿಂದೆಯೇ ಆ ಬಗ್ಗೆ ವೈದ್ಯರು ಒಂದು ಮಾತು ಹೇಳಿದ್ದರು. ಹೆಚ್ಚೆಂದರೆ ನಿಮ್ಮ ತಾಯಿ ಇನ್ನೊಂದು ವರ್ಷ ಬದುಕಬಹುದು ಎಂದಿದ್ದರು. ಆದರೆ ಇಂದಿಗೂ ಪಟ್ಟಮ್ಮಾಳ್ ಅವರು ಮಗ-ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಹಾಗಾದರೆ ಅವರನ್ನು ಇಷ್ಟು ವರ್ಷ ಬದುಕಿಸಿದ ಆ ಶಕ್ತಿ ಯಾವುದು? ‘ನಮ್ಮೆಲ್ಲರ ಪ್ರೀತಿ’ ಎನ್ನುತ್ತಾರೆ ರವಿಚಂದ್ರನ್.
‘ಅಮ್ಮನಿಗೆ ಅಲ್ಜಮೈರ್ ಆಗಿದೆ. ಎಲ್ಲರನ್ನೂ ಆಗಾಗ ಮರೆಯುತ್ತಾರೆ. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನಮ್ಮ ಮನೆಯವರ ಪ್ರೀತಿಯಿಂದಾಗಿ ತಾಯಿ ಇನ್ನೂ ಉಳಿದುಕೊಂಡಿದ್ದಾರೆ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಅವಳಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ:
ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್ ನಿರ್ಧಾರ; ಹೊಸ ಹೆಸರು ಏನು?
ರವಿಚಂದ್ರನ್ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’ ಹೇಳ್ತಾರೆ ಕೇಳಿ..